

ವಿಟ್ಲ: ವಿಟ್ಲದ ಸೇಂಟ್ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ನ.26ರಂದು ಗುರುವಾರ ಸಂಜೆ 5 ಗಂಟೆಗೆ ಶಾಲಾ ಮೈದಾನದಲ್ಲಿ ನಡೆಯಲಿದೆ.ಸೇಂಟ್ ರೀಟಾ


ಸೇಂಟ್ ರೀಟಾ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನ ಸಂಚಾಲಕರಾದ ವಂ. ಫಾ. ಮೈಕಲ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಯೋಜಕ ಅನಿಲ್ ಮಸ್ಕರೇನ್ಹಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಟ್ಲ ಚರ್ಚ್‌ನ ಪ್ಯಾರಿಷ್ ಪಾಸ್ಟರಲ್ ಪರಿಷತ್ ಉಪಾಧ್ಯಕ್ಷ ವಲೇರಿಯನ್ ವೇಗಸ್ ಹಾಗೂ ಸೇಂಟ್ ರೀಟಾ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜಾನೆಟ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಇದಕ್ಕೂ ಮೊದಲು ನ.24ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಟ್ಲ ಚರ್ಚ್‌ನ ಶತಮಾನೋತ್ಸವ ಸಭಾಂಗಣದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸೇಂಟ್ ರೀಟಾ ಶಿಕ್ಷಣ ಸಂಸ್ಥೆಯ ಸಂಚಾಲಕ ವಂ. ಫಾ. ಮೈಕಲ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ.
2015ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಹಾಗೂ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಸುಧರ್ಶನ್ ವಿ. ಮತ್ತು 2019ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಹಳೆಯ ವಿದ್ಯಾರ್ಥಿನಿ, ಬಿ.ಇ. ಬಯೋಟೆಕ್ನಾಲಜಿಯಲ್ಲಿ ಚಿನ್ನದ ಪದಕ ವಿಜೇತೆ ಸಲೀಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಲೇರಿಯನ್ ವೇಗಸ್ ಹಾಗೂ ಸಿಸ್ಟರ್ ಜಾನೆಟ್ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಶಾಲೆಯ ಪ್ರಾಂಶುಪಾಲ ವಂ. ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಮುಖ್ಯ ಶಿಕ್ಷಕಿ ಸಿಸ್ಟರ್ ಮರೀನಾ, ವಿದ್ಯಾರ್ಥಿ ನಾಯಕಿ ಕ್ಲಾರಿಸ್ ಜಾಯ್ಸಿ ಲೋಬೋ ಹಾಗೂ ಸಹಾಯಕ ವಿದ್ಯಾರ್ಥಿ ನಾಯಕಿ ಅಲ್ವಿಶಾ ಪಾಯ್ಸ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಿದ್ದಾರೆ.








