Monday, November 23, 2026
spot_imgspot_img
spot_imgspot_img

ಗಡಿಪಾರಾಗಿರುವ ನರಸಿಂಹ ಮಾಣಿ ಮನೆಗೆ ಜಗದೀಶ್ ಕಾರಂತ್ ಭೇಟಿ

- Advertisement -
- Advertisement -

ಪುತ್ತೂರು : ಗಡಿಪಾರಾಗಿರುವ ನರಸಿಂಹ ಮಾಣಿ ಅವರ ಮನೆಗೆ ಹಿಂದೂ ಜಾಗರಣ ವೇದಿಕೆಯ ಅಖಿಲಾ ಭಾರತ ಟೋಳಿ ಸದಸ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಭೇಟಿ ನೀಡಿದರು.

ಜಿಲ್ಲಾಡಳಿತ ಜಿದ್ದಿಗೆ ಬಿದ್ದು ಗಡಿಪಾರು ಮಾಡಿ , ನರಸಿಂಹ ಮಾಣಿ ಪೋಲಿಸರ ಕೈಗೆ ಸಿಗದ ಕಾರಣ ಮಾಣಿ ಪೇಟೆಯಲ್ಲಿ ಡಂಗೂರ ಸಾರಿದ ನಂತರ ಕರಾವಳಿಯ ಹಿಂದೂ ಸಮಾಜ ಪ್ರತಿಕ್ರಿಯೆ ಕೊಟ್ಟ ರೀತಿ ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡಿದೆ.

ಡಂಗುರ ಸಾರಿದ ನಂತರ ನರಸಿಂಹ ಮಾಣಿಯ ಬೆಂಬಲಕ್ಕೆ ಹಿಂದೂ ಸಮಾಜ ನಿಂತಿದೆ, ಹಿಂದೂ ಮುಖಂಡರ ಸಹಿತ ರಾಜಕೀಯ ಮುಖಂಡರು ಹಿಂದೂ ಸಾಮಾಜಿಕ ಕಾರ್ಯಕರ್ತನ ಮನೆ ಕಡೆ ಮುಖ ಮಾಡಿದ್ದು, ಇಂದು ಹಿಂದೂ ಜಾಗರಣ ವೇದಿಕೆಯ ಅಖಿಲಾ ಭಾರತ ಟೋಳಿ ಸದಸ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು.

ನಿಮ್ಮೊಂದಿಗೆ ಜಾಗರಣ ವೇದಿಕೆ ಮತ್ತು ಹಿಂದು ಸಮಾಜ ಯಾವಾಗಲೂ ಜೊತೆಯಿದೆ, ಧೃತಿಗೆಡಬೇಡಿ ಎಂದರು. ಈ ಸಂಧರ್ಭದಲ್ಲಿ ಜಾಗರಣ ವೇದಿಕೆಯ ಪ್ರಾಂತ ಪ್ರಮುಖರು ಜಿಲ್ಲಾ ಮತ್ತು ತಾಲೂಕು ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!