Tuesday, July 1, 2025
spot_imgspot_img
spot_imgspot_img

ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಮೂಸಾ ಕರೀಂ ಮಾಣಿ ಪುನರಾಯ್ಕೆ

- Advertisement -
- Advertisement -

ಮಾಣಿ: ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ವಾರ್ಷಿಕ ಮಹಾಸಭೆಯು ಶುಕ್ರವಾರದಂದು ಬದ್ರಿಯಾ ಮದ್ರಸಾ ಹಾಲ್ ನಲ್ಲಿ ನಡೆಯಿತು. ಜಮಾಅತಿನ ಹಿರಿಯ ಮುಖಂಡ ಬಂಡಾಡಿ ಮುಹಮ್ಮದ್ ಹಾಜಿಯವರ ನೇತ್ರತ್ವದಲ್ಲಿ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಉಳ್ತೂರು ದುಆ ನೆರವೇರಿಸಿದರು.

ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್ ಸ್ವಾಗತ ಮಾಡಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು. 2021 ನೇ ಸಾಲಿಗೆ ಹಾಲಿ ಆಡಳಿತ ಸಮಿತಿಯನ್ನೇ ಮುಂದುವರಿಸಲು ಸಭೆ ಸರ್ವ ಸಮ್ಮತವಾಗಿ ತೀರ್ಮಾನಿಸಿತು.

ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಮೂಸಾ ಕರೀಂ ಮಾಣಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಹಂಝ ಕಾಯರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಮೀರುದ್ದೀನ್,ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಗುಡ್ಡೆ ಹಾಗೂ ಅಬ್ದುಲ್ ಕರೀಂ ನೆಲ್ಲಿ.

ಕೋಶಾಧಿಕಾರಿಯಾಗಿ ಹಮೀದ್ ನೆಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಮಹಮ್ಮದ್ ಅಲೀ ಮುಸ್ಲಿಯಾರ್,ಅಬ್ದುರ್ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು, ಎಸ್ ಆರ್ ಅಬೂಬಕರ್(ಉಞ್ಞಾಕ),ಲತೀಫ್ ಲೈಮ್,ಅಬ್ದುರ್ರಹ್ಮಾನ್ ಪುತ್ತು,ಯೂಸುಫ್ ಹಾಜಿ,ಎಸ್ ಆರ್ ಸುಲೈಮಾನ್,ಅಬ್ದುಲ್ ಖಾದರ್ ಮಾಣಿ,ಹಸನ್ ಶಾಫಿ,ಹಸೈನಾರ್ ಟೈಲರ್,ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಹಾಜಿ ಬಂಡಾಡಿ ಹಾಗೂ ಉಮರುಲ್ ಫಾರೂಕ್ ಬದ್ರಿಯಾ ಗ್ರೌಂಡ್ ಎಂಬವರನ್ನು ಆರಿಸಲಾಯಿತು.

- Advertisement -

Related news

error: Content is protected !!