Tuesday, July 8, 2025
spot_imgspot_img
spot_imgspot_img

ಕೇರಳ ಪೊಲೀಸರಿಂದ ಸನ್ನಿ ಲಿಯೋನ್ ವಿಚಾರಣೆ

- Advertisement -
- Advertisement -

ತಿರುವನಂತಪುರಂ: ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ 29 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದಡಿ ಕೇರಳ ಪೊಲೀಸರಿಂದ ತೀವ್ರ ವಿಚಾರಣೆ ನಡೆಸಿದ್ದಾರೆ.

ದೂರುಗಳನ್ವಯ ಕೇರಳ ಪೊಲೀಸರು ಸನ್ನಿ ಲಿಯೋನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಕೊರೊನಾ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿಲ್ಲ. ನಾನು ಕಾರ್ಯಕ್ರಮಕ್ಕೆ ಭಾಗವಹಿಸಲು 12 ಲಕ್ಷ ರೂಪಾಯಿ ಮಾತ್ರ ಪಡೆದಿದ್ದೇನೆ, ಆ ಹಣವನ್ನು ಹಿಂದಿರುಗಿಸುತ್ತೇನೆ. ಅಲ್ಲದೇ 5 ಬಾರಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹೀಗಾಗಿ ಎಲ್ಲದಕ್ಕೂ ಕಾರಣ ಆ ಕಾರ್ಯಕ್ರಮದ ಸಂಘಟಕರು ಎಂದು ಸನ್ನಿ ಲಿಯೋನಿ ಆರೋಪಿಸಿದ್ದಾರೆ.

ಕೊಚ್ಚಿಯಲ್ಲಿ ಏರ್ಪಡಿಸಲಾಗಿದ್ದ 2 ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ಹೇಳಿ ಸನ್ನಿ ಲಿಯೋನ್ 29 ಲಕ್ಷ ಪಡೆದಿದ್ದಾರೆ. ಬಳಿಕ ಕಾರ್ಯಕ್ರಮಕ್ಕೆ ಬಾರದೆ ವಂಚಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ರವರನ್ನು ವಿಚಾರಣೆ ಮಾಡಲಾಗಿತ್ತು.

- Advertisement -

Related news

error: Content is protected !!