Saturday, July 5, 2025
spot_imgspot_img
spot_imgspot_img

ಕೋಳಿ ಅಂಕ ನೋಡಲು ಹೋದವ 3 ಇಂಚಿನ ಚೂರಿ ತಗುಲಿ ಸಾವು

- Advertisement -
- Advertisement -

ಹೈದರಾಬಾದ್: ಕೋಳಿ ಕಾಳಗ ಸ್ಪರ್ಧೆ ವೇಳೆ ಕೋಳಿಕಾಲಿಗೆ ಕಟ್ಟಿದ್ದ 3 ಇಂಚಿನ ಚೂರಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ತನುಗುಲ್ಲಾ ಸತೀಶ್ ಎಂದು ಗುರುತಿಸಲಾಗಿದೆ. ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಕೋಳಿ ಕಾಳಗವನ್ನು ನೋಡಲು ಹೋದ ಯುವಕ ಕೋಳಿ ಕಾಲಿಗೆ ಕಟ್ಟಿದ್ದ ಚಾಕು ತಗುಲಿ ಸಾವನ್ನಪ್ಪಿದ್ದಾನೆ.

ಕಾನೂನುಬಾಹಿರವಾದ ಕೋಳಿ ಕಾಳಗ ಸ್ಪರ್ಧೆಯನ್ನು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಕೋಳಿಕಾಳಗ ನಡೆಸಬಾರದೆಂದು ಹೈಕೋರ್ಟ್ ಆದೇಶವಿದೆಯಾದರೂ, ಸ್ಥಳೀಯರು ಮುಕ್ತವಾಗಿಯೇ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ.

ಸತೀಶ್ ಕೋಳಿಕಾಳಗವನ್ನು ನೋಡಲು ಹೋಗಿದ್ದಾನೆ. ಕೋಳಿಯ ಕಾಲಿಗೆ ಜೋಡಿಸಲಾಗಿದ್ದ ಮೂರು ಇಂಚಿನ ಚೂರಿ ಆಕಸ್ಮಿಕವಾಗಿ ಸತೀಶ್ ಬಳಿ ಕೋಳಿ ಹಾರಿ ಬಂದಿದೆ. ಈ ವೇಳೆ ಕೋಳಿ ಕಾಲಿಗೆ ಕಟ್ಟಿರುವ ಚೂರಿ ತೊಡೆಸಂದಿಗೆ ತಗುಲಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸತೀಶ್‍ನನ್ನು ಆಸ್ಪತ್ರೆಗೆ ಕರೆದುಕೊಂದು ಹೋಗಲಾಯಿತ್ತು. ಆದರೆ ಸತೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕಾನೂನು ಬಾಹೀರವಾಗಿ ಕೋಳಿಕಾಳಗವನ್ನು ಎರ್ಪಡಿಸಿದ್ದ ಜನರು ಸತೀಶ್ ಸಾವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಕೋಳಿ ಕಾಳಗದ ವೇಳೆ ಕೋಳಿ ಮಾತ್ರವಲ್ಲದೇ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ ಎಂದು ಗೊಲ್ಲಪಲ್ಲಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!