Monday, September 21, 2026
spot_imgspot_img
spot_imgspot_img

ಸಮ್ಯಕ್ತ್ ಜೈನ್ ರವರಿಗೆ ಜೈನ ಕಾಶಿಯಲ್ಲಿ “ಜೈನ ಯುವ ಸಾಹಿತಿ” ಸನ್ಮಾನ

- Advertisement -
- Advertisement -

ಮೂಡಬಿದ್ರೆ: ಧವಲತ್ರಯಗಳ ನೆಲೆವೀಡು ಮೂಡಬಿದ್ರೆ ಬಡಗ ಬಸದಿ ಶ್ರೀ ಚಂದ್ರನಾಥ ಸ್ವಾಮಿಯ ರಥೋತ್ಸವವು ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿದ್ದು , ಯುವ ಸಾಹಿತಿಯಾಗಿ ಹೊರಹೊಮ್ಮಿದ ಸಮ್ಯಕ್ತ್ ಜೈನ್ ರವರ ಸಾಧನೆಗಳನ್ನು ಪರಿಗಣಿಸಿ “ಜೈನ ಯುವ ಸಾಹಿತಿ” ಎಂದು ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಧರ್ಮಸ್ಥಳದ.ಡಿ.ಸುರೇಂದ್ರ ಕುಮಾರ್, ಅಳದಂಗಡಿಯ ತಿಮ್ಮಣ್ಮ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ, ಮಾಜಿ ಸಚಿವ ಅಭಯಚಂದ್ರ ಜೈನ್, ಬಸದಿಯ ಮೊಕ್ತೇಸರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಎಸ್.ಬಿ ಕಾಲೇಜು ನೆಲ್ಯಾಡಿಯಲ್ಲಿ ಮುಂದುವರಿಸುತ್ತಿರುವ ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಧರಣೇಂದ್ರ ಹಾಗೂ ಮಂಜುಳಾ ರವರ ಸುಪುತ್ರ.

- Advertisement -

Related news

error: Content is protected !!