Friday, July 4, 2025
spot_imgspot_img
spot_imgspot_img

ಸಮುದ್ರದಾಳದಲ್ಲಿ ಕಂಪಿಸಿದ ವಸುಂಧರೆ -6 ಗಂಟೆಯಲ್ಲಿ 3 ಬಾರಿ ಭೂಕಂಪ

- Advertisement -
- Advertisement -

ವಿಲಿಂಗ್‍ಟನ್: ನ್ಯೂಜಿಲೆಂಡ್ ನ ಉತ್ತರ ದ್ವೀಪದಲ್ಲಿ ಭೂಕಂಪದ ಅನುಭವವಾಗಿದೆ. ಆರು ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಪೆಸಿಪಿಕ್ ಮಹಾ ಸಾಗರದಲ್ಲಿ ಸುನಾಮಿಯ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಡಲ ತೀರದ ಬಳಿಯ ಸಾವಿರಾರು ಜನರನ್ನ ಎತ್ತರದ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಹಾಗೆ ಬೀಚ್ ಗಳಲ್ಲಿ ನಿರಂತರವಾಗಿ ಸೈರನ್ ಹಾಕುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ಯಾವುದೇ ಸಮಯದಲ್ಲಿ ಭಾರೀ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ. ಆತಂಕದ ನಡುವೆಯೇ ಅಧಿಕಾರಿಗಳು ಜನರನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ನಡೆದಿದೆ. ಸುಮಾರು ಮೂರು ಮೀಟರ್ ನಿಂದ 10 ಮೀಟರ್ ಎತ್ತರದವರೆಗೆ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಸಮುದ್ರದ ವ್ಯಾಪ್ತಿಯಲ್ಲಿ ಬರುವ ಜನರಿಗೆ ಎತ್ತರ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದ್ದು, ಮುಂದಿನ ಆದೇಶದವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದೆ. ಸರ್ಕಾರದ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಾರ್ವಜನಿಕರಿಗಾಗಿ ಸಹಾಯವಾಣಿಯನ್ನ ಆರಂಭಿಸಿದೆ. ನ್ಯೂಜಿಲೆಂಡ್ ಉತ್ತರ ದ್ವೀಪದ ವ್ಯಾಪ್ತಿಯಲ್ಲಿ 8.1 ತೀವ್ರತೆಯ ಭೂಕಂಪ ಆಗಿದೆ. ಇದಕ್ಕೂ ಮೊದಲು 7.4 ಮತ್ತು 7.3 ತೀವ್ರತೆಯ ಭೂಕಂಪದ ಅನುಭವವಾಗಿದೆ.

- Advertisement -

Related news

error: Content is protected !!