Tuesday, April 30, 2024
spot_imgspot_img
spot_imgspot_img

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ದೇವನಿಧಿ ದುರ್ಬಳಕೆ-ಗುರುಪ್ರಸಾದ್ ಗೌಡ ಆರೋಪ

- Advertisement -G L Acharya panikkar
- Advertisement -

ಉಡುಪಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ದೇವನಿಧಿ ದುರ್ಬಳಕೆಯಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಕೊಲ್ಲೂರು ದೇವಸ್ಥಾನದ ವ್ಯವಹಾರಗಳ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಲೆಕ್ಕ ಪರಿಶೋಧಕರ ವರದಿಯನ್ವಯ ದೇವಸ್ಥಾನದಲ್ಲಿ ₹ 21.8 ಕೋಟಿ ವ್ಯವಹಾರ ಸಂಶಯಾಸ್ಪದವಾಗಿದೆ. ಈ ಕುರಿತು ತನಿಖೆಯಾಗಬೇಕು, ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

2018-2019ರ ವರೆಗೆ ದೇಣಿಗೆ ಸ್ವೀಕರಿಸಿದ ಆಭರಣ ಗಳ ಪಟ್ಟಿ ಸರಕಾರಿ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ದೇವಾಲಯ ಲೆಕ್ಕಪತ್ರದ ಬಗ್ಗೆ ಆಡಿಟ್‌ ಕೂಡ ನಡೆದಿಲ್ಲ. 2016ರಲ್ಲಿ ದೇವಾಲಯದ ಕೋಟ್ಯಂತರ ರೂ. ಚಿನ್ನ ಕಳ್ಳತನ ಪ್ರಕರಣದಲ್ಲಿ ಆಗಿನ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಿಬಂದಿ ಭಾಗಿಯಾಗಿದ್ದರು. ಈಗಲೂ ಅದೇ ಕಾರ್ಯ ನಡೆದಿದೆ ಎಂದು ದೂರಿದರು.

ದೇಗುಲದಲ್ಲಿ ನಡೆದಿರುವ ಅವ್ಯವಹಾರ ಮಾಹಿತಿ ಹಕ್ಕು ಅಧಿನಿಯಮದಲ್ಲಿ ದೊರಕಿರುವ ಪತ್ರಗಳಿಂದ ಬಹಿರಂಗಗೊಂಡಿದೆ. ಅರ್ಪಣೆಯಲ್ಲಿ ದೊರೆತಿರುವ ಬಂಗಾರ-ಬೆಳ್ಳಿಗಳನ್ನು ಕೊಳ್ಳೆ ಹೊಡೆಯಲಾಗಿದ್ದು ಸರಕಾರ 15 ದಿನಗಳ ಒಳಗೆ ತನಿಖೆಗೆ ಆದೇಶಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

- Advertisement -

Related news

error: Content is protected !!