Sunday, July 6, 2025
spot_imgspot_img
spot_imgspot_img

15 ವರ್ಷಕ್ಕಿಂತ ಹಳೆಯ ವಾಹನಗಳ ನವೀಕರಣಕ್ಕೆ ಬರೋಬ್ಬರಿ 5000 ರೂ. ಅಧಿಕ ಶುಲ್ಕ ..!

- Advertisement -
- Advertisement -

ಹೊಸದಿಲ್ಲಿ: ಹದಿನೈದು ವರ್ಷಗಳಿಗಿಂತ ಹೆಚ್ಚು ಹಳೆಯ ಕಾರಿನ ನೋಂದಣಿಯನ್ನು ನವೀಕರಣಗೊಳಿಸಲು ನಾವು ಅಕ್ಟೋಬರ್‌ನಿಂದ 5,000 ರೂಪಾಯಿಗಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಇದು ನಾವು ಸಾಮಾನ್ಯವಾಗಿ ನೋಂದಣಿ ನವೀಕರಣಕ್ಕೆ ಪಾವತಿಸುವ ಶುಲ್ಕಕ್ಕಿಂತ 8 ಪಟ್ಟು ಹೆಚ್ಚಾಗಿದೆ.

ಇದೇ ರೀತಿ ಹಳೆಯ ಬೈಕ್‌ನ ನೋಂದಣಿ ನವೀಕರಿಸಲು 1,000 ಶುಲ್ಕ ಪಾವತಿಸಬೇಕು. ಪ್ರಸ್ತುತ ಈ ಶುಲ್ಕ 300 ರೂಪಾಯಿ. 15 ವರ್ಷ ಮೀರಿದ ಬಸ್ ಅಥವಾ ಟ್ರಕ್‌ನ ಸುಸ್ಥಿತಿ ನವೀಕರಣ ಪ್ರಮಾಣಪತ್ರದ ನವೀಕರಣಕ್ಕೆ 12,500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಇದು ಈಗ ಪಾವತಿಸುವ ಶುಲ್ಕಕ್ಕಿಂತ ಸುಮಾರು 21 ಪಟ್ಟು ಅಧಿಕ. 15 ವರ್ಷಗಳಿಗಿಂತ ಹಿಂದಿನ ವಾಹನವನ್ನು ಗುಜರಿಗೆ ಹಾಕುವ ನೀತಿಯನ್ನು ಜಾರಿಗೊಳಿಸುವ ಯೋಜನೆಯ ಭಾಗವಾಗಿ ಈ ಶುಲ್ಕ ಏರಿಕೆಯನ್ನು ಪ್ರಸ್ತಾವಿಸಿ ರಸ್ತೆ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.

ನೂತನ ಪ್ರಸ್ತಾವದ ಪ್ರಕಾರ ಖಾಸಗಿ ವಾಹನಗಳ ನೋಂದಣಿ ನವೀಕರಣ ವಿಳಂಬಕ್ಕೆ ಪ್ರತಿ ತಿಂಗಳಿಗೆ 300 ರೂಪಾಯಿಯಿಂದ 500 ರೂಪಾಯಿ ದಂಡ. ವಾಣಿಜ್ಯ ವಾಹನಗಳ ಸುಸ್ಥಿತಿ ಪ್ರಮಾಣಪತ್ರ ನವೀಕರಣ ವಿಳಂಬಕ್ಕೆ ಪ್ರತಿ ದಿನ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ

- Advertisement -

Related news

error: Content is protected !!