Tuesday, July 1, 2025
spot_imgspot_img
spot_imgspot_img

ವಿಮಾನದ ಮೇಲೆ ಸೋನು ಸೂದ್ ಭಾವಚಿತ್ರ- ಸ್ಪೈಸ್ ಜೆಟ್‍ನಿಂದ ವಿಶೇಷ ಗೌರವ

- Advertisement -
- Advertisement -

ಮುಂಬೈ: ಕೊರೊನಾ ಲಾಕ್‍ಡೌನ್ ವೇಳೆ ನಟ ಸೋನು ಸೂದ್ ಬಡವರಿಗೆ ಮಾಡಿದ ಸಹಾಯ ಮೆಚ್ಚಿದ ಖಾಸಗಿ ವಿಮಾನ ಸಂಸ್ಥೆಯೊಂದು ವಿಭಿನ್ನವಾಗಿ ಗೌರವ ಸಲ್ಲಿಸಿದೆ. ಈ ಸಂತೋಷವನ್ನು ಸೋನು ಸೂದ್ ಟ್ವೀಟ್ ಮಾಡಿದ್ದಾರೆ. ಸೋನು ಟ್ವೀಟ್‍ಗೆ ಬಾಲಿವುಡ್ ತಾರೆಯರು ಸಹ ಪ್ರತಿಕ್ರಿಯಿಸಿ ಶುಭಕೋರಿದ್ದಾರೆ.

ಅಭಿಷೇಕ್ ಬಚ್ಚನ್, ಕಾಜಲ್ ಅಗರ್ವಾಲ್ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ ಮಾಡಿ ಶುಭ ಕೋರಿದ್ದ ಹಲವರಿಗೆ ಸೋನು ಅವರು ಟ್ವಿಟ್ಟರ್ ಮೂಲಕವಾಗಿ ಧನ್ಯವಾದವನ್ನು ಹೇಳಿದ್ದಾರೆ.

ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್ ರಿಯಲ್ ಲೈಫ್‍ನಲ್ಲಿ ಹೀರೋ ಆಗಿದ್ದಾರೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸೋನು ಮಾಡಿದ ಸಹಾಯವನ್ನು ಮೆಚ್ಚಿ ರಿಯಲ್ ಲೈಫ್ ಹೀರೋಗೆ ಖಾಸಗಿ ವಿಮಾನ ಸಂಸ್ಥೆಯೊಂದು ವಿಮಾನದ ಮೇಲೆ ಸೋನು ರವರ ಭಾವಚಿತ್ರ ಬಿಡಿಸಿ ವಿಶೇಷ ಗೌರವ ಸಲ್ಲಿಸಿದೆ.

ಸ್ಪೈಸ್ ಜೆಟ್ ಬೋಯಿಂಗ್-737 ವಿಮಾನ ಮೇಲೆ ಸೋನು ಸೂದ್ ಅವರ ಒಂದು ಫೋಟೋವನ್ನು ಹಾಕಿ ಸಂರಕ್ಷಕ ಸೋನು ಸೂದ್‍ಗೆ ಒಂದು ಸೆಲ್ಯೂಟ್ ಎಂದು ವಿಮಾನದ ಮೇಲೆ ಬರೆದುಕೊಂಡು ಸೋನು ಸೂದ್ ಅವರಿಗೆ ಸಲಾಂ ಎಂದಿದೆ.

ಈ ಮೂಲಕ ವಿದೇಶಿ ವಿಮಾನಯಾನ ಸಂಸ್ಥೆಯ ಗೌರವ ಪಡೆದುಕೊಂಡ ಮೊದಲ ಭಾರತೀಯ ನಟ ಎನ್ನುವ ಹೆಗ್ಗಳಿಕೆ, ಖ್ಯಾತಿಗೆ ಸೋನು ಸೂದ್ ಪಾತ್ರರಾಗಿದ್ದಾರೆ. ವಿಮಾನ ಮೇಲೆ ಅವರ ಭಾವಚಿತ್ರವನ್ನು ಹಾಕುವ ಮೂಲಕ ಸ್ಪೈಸ್ ಜೆಟ್ ವಿಶೇಷ ಮತ್ತು ವಿಭಿನ್ನವಾದ ಗೌರವವನ್ನು ಸೂಚಿಸಿದೆ.

ಮೋಗಾದಿಂದ ಮುಂಬೈಗೆ ಹೋಗುವ ವಿಮಾನದಲ್ಲಿ ನಾನು ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದೇನೆ. ನನ್ನ ಹೆತ್ತವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋ ಹಾಕಿ ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

- Advertisement -

Related news

error: Content is protected !!