Monday, July 7, 2025
spot_imgspot_img
spot_imgspot_img

ಅಡ್ಡಬಂದ ಮಂಗವನ್ನು ತಪ್ಪಿಸಲು ಹೋಗಿ ಚಾಲಕ ಸಾವು

- Advertisement -
- Advertisement -

ಶಿವಮೊಗ್ಗ: ಅಡ್ಡಬಂದ ಮಂಗವನ್ನ ತಪ್ಪಿಸಲು ಹೋಗಿ ಲಗೇಜ್ ಆಟೋ ಸಮೇತ ಮಗಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವುಕಂಡಿದ್ದು ಹಿಂಬದಿಯಲ್ಲಿದ್ದ ಈತನ ಪುತ್ರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಬುಡೇನ್ ಸಾಬ್ (62) ಎಂಬ ಚಾಲಕನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಲಗೇಜ್ ಆಟೋ ದಲ್ಲಿ ತೆರಳುವಾಗ ಸಕ್ರೇಬೈನಿಂದ 5 ಕಿ.ಮಿ.ದೂರದಲ್ಲಿ ರಸ್ತೆಗೆ ಮಂಗಗಳು ಅಡ್ಡಬಂದಿವೆ. ಈ ಮಂಗಗಳನ್ನ ತಪ್ಪಿಸಲು ಹೋದ ಬುಡೇನ್ ಸಾಬ್ ಗೆ ನಿಯಂತ್ರಣಕ್ಕೆ ಸಿಗಲಿಲ್ಲ. ಆಟೋ ಮಗಚಿಕೊಂಡ ಪರಿಣಾಮ ಬುಡೇನ್ ಸಾಬ್ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ.

ಕೆಎ 14 ಬಿ 8792 ಲಗೇಜ್ ಆಟೋದಲ್ಲಿ ಚಲಿಸುವಾಗ ಈ ಘಟನೆ ಸಂಭವಿಸಿದೆ. ಹಿಂಬದಿಯಲ್ಲಿ ಬುಡೇನ್ ಸಾಬ್ ರವರ ಪುತ್ರ ಪ್ರಯಾಣಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ಬುಡೇನ್ ಸಾಬ್ ಬೊಮ್ಮನ್ ಕಟ್ಟೆ ನಿವಾಸಿಯಾಗಿದ್ದು, ಹಾಸಿಗೆ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದನು. ತುಂಗ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!