Tuesday, July 8, 2025
spot_imgspot_img
spot_imgspot_img

ಸಕಲೇಶಪುರ ತಾಲೂಕಿನ ಹಳೇ ಬೇಲೂರು ಗ್ರಾಮದಲ್ಲಿ ನಾಲ್ಕು ಅಡಿ ಎತ್ತರದ ಚನ್ನಕೇಶವ ಸ್ವಾಮಿ ವಿಗ್ರಹ ಪತ್ತೆ!

- Advertisement -
- Advertisement -

ಹಾಸನ: ಸಕಲೇಶಪುರ ತಾಲೂಕಿನ ಹಳೇ ಬೇಲೂರು ಗ್ರಾಮದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ನಾಲ್ಕು ಅಡಿ ಎತ್ತರದ ಚನ್ನಕೇಶವ ಸ್ವಾಮಿ ವಿಗ್ರಹ ಪತ್ತೆಯಾಗಿದೆ. ಗ್ರಾಮಸ್ಥರು ಈ ವಿಗ್ರಹವನ್ನು ಸಂರಕ್ಷಿಸಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಪ್ರಾಚೀನ ಕಾಲದಿಂದಲೂ ಈ ಗ್ರಾಮ ಚನ್ನಕೇಶವ ಸ್ವಾಮಿಯ ಮೂಲ ನೆಲೆ ಎಂಬ ಪ್ರತಿಪಾದನೆ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಹೊಯ್ಸಳರ ಕಾಲದ ಹಳೆಯ ದೇವಾಲಯ ಇದೆ. ಇದೇ ಗ್ರಾಮದಲ್ಲಿ ಹೊಯ್ಸಳರು  ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.  ಆದರೆ ಪಾಳೆಗಾರರ ದಾಳಿಯ ಭಯದಿಂದ ದೇವಾಲಯ ನಿರ್ಮಾಣ ಯೋಜನೆಯನ್ನ ಬೇಲೂರಿಗೆ ಸ್ಥಳಾಂತರಿಸಿದ್ದರು ಎನ್ನಲಾಗಿದೆ.

ಈ ಕಾರಣದಿಂದಲೇ ಗ್ರಾಮಕ್ಕೆ ಹಳೇ ಬೇಲೂರು ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಸದ್ಯ ವಿಗ್ರಹವನ್ನು ಸಂರಕ್ಷಿಸಿದ ಸ್ಥಳೀಯರು ಅದನ್ನು ದೇವಸ್ಥಾನದಲ್ಲಿ ಇಟ್ಟಿದ್ದಾರೆ, ಸ್ಥಳಕ್ಕೆ ತಹಶೀಲ್ದಾರ್​ ಜಯಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!