Monday, October 19, 2026
spot_imgspot_img
spot_imgspot_img

ಮಹಿಳಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಬಸ್ಸು ನಿಲ್ಲಿಸಲಿಲ್ಲ; ಅರ್ಧದಲ್ಲೇ ಬಸ್ಸು ನಿಲ್ಲಿಸಿದ ಕದ್ರಿ ಟ್ರಾಫಿಕ್ ಪೊಲೀಸರು

- Advertisement -
- Advertisement -

ಮಂಗಳೂರು: ಟ್ರಾಫಿಕ್ ವಾರ್ಡನ್‍ಗೆ ಬಸ್ಸು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಬಸ್‍ನಲ್ಲಿದ್ದ ಪೂರ್ತಿ ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.

ಪಿ.ಟಿ.ಸಿ 14 ನಂಬರ್‍ನ ಬಸ್ಸು ಮಹಿಳಾ ಟ್ರಾಫಿಕ್ ಸಿಬ್ಬಂದಿಗೆ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕದ್ರಿ ಟ್ರಾಫಿಕ್ ಪೊಲೀಸರು ಬಸ್ ನಿಲ್ಲಿಸಿ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಟ್ರಾಫಿಕ್ ಪೊಲೀಸರು ಬಸ್ಸನ್ನು ನಿಲ್ಲಿಸಿದ್ದು ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.

ಕ್ಷುಲ್ಲಕ ಕಾರಣವೊಂದಕ್ಕೆ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರಿಗೆ ತೊಂದರೆ ಮಾಡಿದ ಟ್ರಾಫಿಕ್ ಪೊಲೀಸರ ನಡೆ ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!