Wednesday, June 24, 2026
spot_imgspot_img
spot_imgspot_img

ಬಜ್ಪೆ: ಚಿಕನ್ ಸೆಂಟರ್ ಮಳಿಗೆಯಲ್ಲಿ ಅಕ್ರಮ ದನದ ಮಾಂಸ ಮಾರಾಟ!

- Advertisement -
- Advertisement -

ಬಜ್ಪೆ: ಮೂಡುಪೆರಾರ ಗ್ರಾಮದ ಸೂರಲ್ಪಾಡಿಯಲ್ಲಿರುವ ಸಲ್ವಾ ಚಿಕನ್ ಸೆಂಟರ್ ಮಳಿಗೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದದನ್ನು ಬಜ್ಪೆ ಪೊಲೀಸರು ಎ.೪ ರಂದು ಪತ್ತೆ ಮಾಡಿದ್ದಾರೆ.


ಸುಮಾರು 23 ಕೆ.ಜಿ ದನದ ಮಾಂಸ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಮಹಮ್ಮದ್ ಸಮೀರ್ ಮತ್ತು ಮಹಮ್ಮದ್ ಸಫಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರು ಕೃತ್ಯಕ್ಕೆ ಬಳಸಿದ್ದ ಮಾರುತಿ ಆಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯ್ಕ್ ಅವರು ಸಿಬ್ಬಂದಿಯೊಂದಿಗೆ ಚಿಕನ್ ಸ್ಟಾಲ್ ಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದನವನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅದನ್ನು ಮಾಂಸ ಮಾಡಿ ಮಾರಾಟ ನಡೆಸುತ್ತಿದ್ದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!