Saturday, July 5, 2025
spot_imgspot_img
spot_imgspot_img

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇವೆಯಲ್ಲಿ ಸಮಸ್ಯೆ: ಸಮಸ್ಯೆ ಕುರಿತು ಬಳಕೆದಾರರಿಂದ ಡೌನ್‌ಡಿಟೆಕ್ಟರ್ ನಲ್ಲಿ ಪೋಸ್ಟ್!

- Advertisement -
- Advertisement -

ಸಾಮಾಜಿಕ ಮಾಧ್ಯಮ ತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಗುರುವಾರ ತಡರಾತ್ರಿ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗದೆ ಸಮಸ್ಯೆ ಎದುರಾಯಿತು.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್‌ಗಳ ಸೇವೆ ಲಭ್ಯವಾಗದೇ ಬಳಕೆದಾರರು ಪರದಾಡಿದರು. ಕೆಲಸಮಯದ ನಂತರ ಮತ್ತೆ ಉಭಯ ಆ್ಯಪ್‌ಗಳ ಸೇವೆ ಜಾಗತಿಕವಾಗಿ ಲಭ್ಯವಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ. ಗುರುವಾರ ತಡರಾತ್ರಿ ಕೆಲ ಸಮಯದವರೆಗೆ ಜಾಗತಿಕವಾಗಿ ಕೆಲವು ಬಳಕೆದಾರರಿಗೆ ಆ್ಯಪ್ ಸೇವೆ ಲಭ್ಯವಾಗಿಲ್ಲ ಎಂದು ಡೌನ್‌ಡಿಟೆಕ್ಟರ್.ಕಾಂ ವರದಿ ಮಾಡಿದೆ.

ಸುಮಾರು 3,000ಕ್ಕೂ ಅಧಿಕ ಇನ್‌ಸ್ಟಾಗ್ರಾಂ ಬಳಕೆದಾರರು ಮತ್ತು 1,000ಕ್ಕೂ ಅಧಿಕ ಫೇಸ್‌ಬುಕ್ ಬಳಕೆದಾರರು ಸಮಸ್ಯೆ ಕುರಿತು ಡೌನ್‌ಡಿಟೆಕ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

driving
- Advertisement -

Related news

error: Content is protected !!