Friday, July 4, 2025
spot_imgspot_img
spot_imgspot_img

ಬೆಂಗಳೂರು: ಮದುವೆ ಸಮಾರಂಭಗಳಲ್ಲಿ 100 ಜನ ಮೀರದಂತೆ ಸಚಿವ ಸುಧಾಕರ್ ಸೂಚನೆ!

- Advertisement -
- Advertisement -

ಬೆಂಗಳೂರು: ಕೋವಿಡ್19 ಸೋಂಕು ನಿಯಂತ್ರಣಕ್ಕಾಗಿ ಅತಿ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ. ಒಳಾಂಗಣ ಮದುವೆ ಸಮಾರಂಭಕ್ಕೆ 100 ಜನ ಮತ್ತು ಹೊರಾಂಗಣ ಮದುವೆ ಸಮಾರಂಭಕ್ಕೆ 200 ಜನರಿಗಿಂತ ಹೆಚ್ಚು ಮಂದಿ ಸೇರಬಾರದು ಎಂದು ಸಚಿವ ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೈಕ್ರೋ ಕಂಟೋನ್ಮೆಂಟ್ ಹೆಚ್ಚಳ ಮಾಡುತ್ತೇವೆ ಎಂದರು.

driving

ಎರಡನೇ ಅಲೆಯಲ್ಲಿ ಶೇ.95ರಷ್ಟು ಜನರಿಗೆ ಆಸ್ಪತ್ರೆ ಚಿಕಿತ್ಸೆ ಬೇಕಿಲ್ಲ. ಕೇವಲ ಶೇ.5ರಷ್ಟು ಜನರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿದೆ. ಎಲ್ಲರೂ ಸೇರಿ ಸೋಂಕು ನಿಯಂತ್ರಣ ಮಾಡೋಣ. ಅದಷ್ಟು ಬೇಗ ಎರಡನೇ ಅಲೆ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೂ ಕೆಲವರಿಗೆ ಸೋಂಕು ಬಂದಿದೆ. ಬರುವುದಿಲ್ಲವೆಂದು ನಾವು ಹೇಳಿಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ. ಮುಂದೆ ಬರುವ ಮೂರನೇ ಅಲೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸುಧಾಕರ್ ಹೇಳಿದರು.

- Advertisement -

Related news

error: Content is protected !!