Tuesday, July 1, 2025
spot_imgspot_img
spot_imgspot_img

ಪುತ್ತೂರು MLA ಪಕ್ಷೇತರ ಅಭ್ಯರ್ಥಿ ಬಂಧನ!

- Advertisement -
- Advertisement -

ಮಂಗಳೂರು.ಎ.17: ಮೂಡುಬಿದ್ರೆ ಪೊಲೀಸರು ಬಂಧಿಸಿರುವ ದರೋಡೆ ಪ್ರಕರಣದ ಆರೋಪಿಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಪುತ್ತೂರಿನ ಮಾಜಿ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತಿನಲ್ಲಿ ಮಾಜಿ ಸದಸ್ಯನಾಗಿರುವ ಕೆದಂಬಾಡಿ ನಿವಾಸಿ ಅಬ್ದುಲ್ ಬಶೀರ್(40) ಬಂಧಿತ ಆರೋಪಿ. ಮೂಡುಬಿದ್ರೆ, ಬೆಳ್ತಂಗಡಿ, ಉಪ್ಪಿನಂಗಡಿ, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ದರೋಡೆ ನಡೆಸುತ್ತಿದ್ದ ನಾಲ್ಕು ಗ್ಯಾಂಗ್ ಗಳನ್ನು ಮೂಡುಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. 15 ಮಂದಿಯನ್ನು ಬಂಧಿಸಿದ್ದಲ್ಲದೆ, ಆರೋಪಿಗಳು ನೀಡಿದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಸೇರಿ 28 ಪ್ರಕರಣಗಳನ್ನು ಪತ್ತೆ ಮಾಡಲಾಗಿತ್ತು.

ಪೊಲೀಸರ ತನಿಖೆ ಮುಂದುವರಿದಿದ್ದು, ದರೋಡೆ ತಂಡಕ್ಕೆ ವಿವಿಧೆಡೆ ಶೆಲ್ಟರ್ ಮತ್ತು ಹಣಕಾಸು ನೆರವು ನೀಡುತ್ತಿದ್ದ ಅಬ್ದುಲ್ ಬಶೀರ್ ನನ್ನು ಬಂಧಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಸಮಾಜ ಸೇವಕನ ರೀತಿ ಪೋಸು ನೀಡುತ್ತಿದ್ದ ಅಬ್ದುಲ್ ಬಶೀರ್, ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ. ದರೋಡೆ ತಂಡಕ್ಕೆ ವಾಹನ, ದರೋಡೆಯ ಬಳಿಕ ಅಡಗಿಕೊಳ್ಳಲು ಬೇರೆ ಬೇರೆ ಕಡೆ ವ್ಯವಸ್ಥೆ ಮಾಡುತ್ತಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೆ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಅಬ್ದುಲ್ ಬಶೀರ್ ಸಂಚು ನಡೆಸಿದ್ದ ಆರೋಪ ಎದುರಿಸುತ್ತಿದ್ದಾನೆ.

- Advertisement -

Related news

error: Content is protected !!