- Advertisement -
- Advertisement -
ಮಂಗಳೂರು: ಹೊರವಲಯದಲ್ಲಿರುವ ಗಂಜಿಮಠದ ಗಾಂಧಿನಗರದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಸಂಸ್ಥೆಯ ಹತ್ತಿರದ ನಿರ್ಜನ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿಯನ್ನು ಬಿಜು ಎಂದು ಗುರುತಿಸಲಾಗಿದ್ದು, ಇಂದು ಸಂಜೆಯ ವೇಳೆ ನೆರೆ ಮನೆಯ ಮಹಿಳೆ ಬಹಿರ್ದೆಸೆಗೆ ಬಯಲಿಗೆ ತೆರಳಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈತ ಸುಮಾರು 2 ತಿಂಗಳಿನಿಂದೀಚೆಗೆ ಕೆಲಸಕ್ಕಿದ್ದ ಎಂಬ ಮಾಹಿತಿ ತಿಳಿದು ಬಂದಿದ್ದು, ಇನ್ನೊಂದು ಮಾಹಿತಿಯ ಪ್ರಕಾರ ಆತ ನಿನ್ನೆ ಸಂಜೆ ಹೊತ್ತಿಗೆ ಆ ಕಡೆ ತೆರಳುತ್ತಿರುವುದನ್ನು ಕೆಲವರು ಕಂಡಿರುತ್ತಾರೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೋಲಿಸ್ ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ.


- Advertisement -