Thursday, July 10, 2025
spot_imgspot_img
spot_imgspot_img

ಮಂಗಳೂರು: ಬೆಥನಿ ಎಜ್ಯುಕೇಶನ್ ಸೊಸೈಟಿಯ 19 ಮಂದಿಗೆ ಕೊರೊನ ಪಾಸಿಟಿವ್- ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಣೆ!

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮಂಗಳೂರಿನ ಶಿಕ್ಷಣ ಸಂಸ್ಥೆಯ 19 ಮಂದಿಗೆ ಸೋಂಕು ತಗುಲಿದೆ.

ಮಂಗಳೂರು ನಗರದ ಬೆಂದೂರುವೆಲ್ ನಲ್ಲಿರುವ ಬೆಥನಿ ಎಜ್ಯುಕೇಶನ್ ಸೊಸೈಟಿನ 19 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಮೊದಲಿಗೆ ಬೆಥನಿಯ ಓರ್ವ ಸಿಸ್ಟರ್ ಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅದರ ಹಿನ್ನೆಲೆಯಲ್ಲಿ ಉಳಿದ 90 ಜನ ಸ್ಟಾಫ್ ನ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ 19 ಮಂದಿಗೆ ಸೋಂಕು ದೃಢವಾಗಿದೆ. ಸದ್ಯ ಬೆಥನಿ ಎಜುಕೇಶನ್ ಸೊಸೈಟಿ ಸೇರಿ ಇತರೆ ಸಂಸ್ಥೆಗಳನ್ನು ಸೀಲ್‍ಡೌನ್ ಮಾಡಿದ್ದು, ಸೋಂಕಿತರನ್ನು ಕಾನ್ವೆಂಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಈ ಸೊಂಕಿತರಿಂದ ಅದೆಷ್ಟು ಜನ ಸೋಂಕು ಸೋರಿಕೆ ಮಾಡಿದ್ದಾರೆ ಮತ್ತು ಎಷ್ಟು ಜನ ಮಕ್ಕಳಿಗೆ ಸೋಂಕು ಹರಡಿರಬಹುದು ಎನ್ನುವುದು ಇನ್ನೂ ನಿಗೂಢ.

ಬೆಂದೂರ್ ವೆಲ್ ಚರ್ಚ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

driving
- Advertisement -

Related news

error: Content is protected !!