Friday, July 4, 2025
spot_imgspot_img
spot_imgspot_img

ಶೀಘ್ರವೇ ನಡೆಯಲಿದೆ ಐಪಿಯಲ್!

- Advertisement -
- Advertisement -

ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ, ಬಿಸಿಸಿಐ ಐಪಿಎಲ್ 2021ರ ಪಂದ್ಯವನ್ನು ರದ್ದು ಮಾಡಿದೆ. ಐಪಿಎಲ್‌ನ ವಿವಿಧ ತಂಡಗಳ ಕೆಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಆಟಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಪಂದ್ಯಗಳನ್ನು ರದ್ದು ಮಾಡಿರುವ ಬಿಸಿಸಿಐ ಶೀಘ್ರವೇ ಮಹತ್ವದ ಘೋಷಣೆ ಮಾಡಲಿದೆ.

ಸೆಪ್ಟೆಂಬರ್‌ನಲ್ಲಿ ಐಪಿಎಲ್‌ನ 14 ನೇ ಋತುವಿನ ಉಳಿದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಕ್ರಿಕ್‌ಬಜ್ ವರದಿಯ ಪ್ರಕಾರ, ಋತುವಿನ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ ನಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಸೆಪ್ಟೆಂಬರ್ ನಲ್ಲಿ ಪಂದ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಾಗ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಮುಗಿಯಲಿದ್ದು, ವಿದೇಶಿ ಆಟಗಾರರು ಟಿ 20 ವಿಶ್ವಕಪ್‌ಗೆ ಲಭ್ಯವಾಗಲಿದ್ದಾರೆಂದು ಅಧಿಕಾರಿಯೊಬ್ಬರು ಕ್ರಿಕ್ ಬಜ್ ಗೆ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಕೂಡ ಈ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಈಗ ಸಮಯದ ಹುಡುಕಾಟ ನಡೆಸುತ್ತಿದ್ದೇವೆ. ಸೆಪ್ಟೆಂಬರ್ ನಲ್ಲಿ ಪಂದ್ಯ ನಡೆಸುವುದು ಸಾಧ್ಯವೆ ಎನ್ನುವ ಬಗ್ಗೆ ವಿಚಾರ ನಡೆಯುತ್ತಿದೆ. ಈ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

driving
- Advertisement -

Related news

error: Content is protected !!