Friday, July 11, 2025
spot_imgspot_img
spot_imgspot_img

ಸವಣೂರು: ಅಕ್ರಮ ಜಾನುವಾರು ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಸವಣೂರು: ಸವಣೂರು ಗ್ರಾಮದ ಗುಂಡಿಲ ಎಂಬಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಣೂರು ಗ್ರಾಮದ ಗುಂಡಿಲ ಎಂಬಲ್ಲಿ ಆರೋಪಿಗಳಾದ ಮಹಮ್ಮದ್ ಅರಿಗ ಮಜಲು ಹಾಗೂ ಸಿದ್ದಿಕ್ ಉಂಡಿಲ ಎಂಬುವವರು ಜೀಪೊಂದರಲ್ಲಿ ಕರುವೊಂದನ್ನು ತಂದು ಇಳಿಸುತ್ತಿದ್ದದನ್ನು ಗಮನಿಸಿದ ಕುದ್ಮಾರು ಹಿಂ.ಜಾ.ವೇ.ಕಾರ್ಯಕರ್ತರು ಪೊಲೀಸರ ಗಮನಕ್ಕೆ ತರುವ ಮೂಲಕ ಅಕ್ರಮ ಜಾನುವಾರು ಸಾಗಾಟ ಪತ್ತೆ ಮಾಡಿದ್ದಾರೆ.

ಹಿಂ.ಜಾ.ವೇ.ಕಾರ್ಯಕರ್ತರು ಸವಣೂರು ಕಡೆಗೆ ಹೋಗುತ್ತಿರುವಾಗ ಮಹಮ್ಮದ್ ಅರಿಗಮಜಲು ಹಾಗೂ ಸಿದ್ದಿಕ್ ಗುಂಡಿಲ ರವರು ಕರುವನ್ನು ಸ್ಥಳದಲ್ಲಿಯೇ ಬಿಟ್ಟು, ಜೀಪು ಸಮೇತ ಸವಣೂರು ಕಡೆಗೆ ಹೋಗಿದ್ದು, ಈ ಕರುವನ್ನು ಆರೋಪಿಗಳು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಖರೀದಿಸಿ ಪರವಾನಿಗೆ ಪಡೆಯದೆ ಜೀಪಿನಲ್ಲಿ ಸಾಗಾಟ ಮಾಡಲು ಸಾಗಿಸುತ್ತಿದ್ದರೆನ್ನಲಾಗಿದೆ.

ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ, ಬೀಟ್ ಪೋಲಿಸ್ ಕೃಷ್ಣಪ್ಪ ಹಾಗೂ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿದ್ದಾರೆ

driving
- Advertisement -

Related news

error: Content is protected !!