ಮಂಗಳೂರು: ಮಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಡಿಓ ರಾಜೇಂದ್ರ ಶೆಟ್ಟಿ ಅವರ ಮೇಲೆ ಕರ್ತವ್ಯ ನಿರ್ವಹಣೆ ಸಂದರ್ಭ ಗಾಂಜಾ ಟೀಮ್ ಪಂಚಾಯತ್ ಗೆ ನುಗ್ಗಿ ನಿನ್ನೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ಪಿಡಿಓ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾಸ್ಕ್ ಹಾಕುವಂತೆ ಹೇಳಿದಕ್ಕಾಗಿ ಕರ್ತವ್ಯ ನಿರತ ಪಿಡಿಓ ಮೇಲೆ ಹಲ್ಲೆ ನಡೆಸಿದ ಕ್ರಮ ಖಂಡನೀಯ. ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಬೆಳಿಗ್ಗೆ ಮಲ್ಲೂರು ಗ್ರಾಮ ಪಂಚಾಯತ್ ಎದುರು ಮಲ್ಲೂರು ಗ್ರಾಮ ಕೋವಿಡ್ ಸುರಕ್ಷತಾ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಮನವಿ ಪತ್ರವನ್ನು ಅರ್ಪಿಸಿತು.

ಈ ಸಂದರ್ಭದಲ್ಲಿ ಮಲ್ಲೂರು ಗ್ರಾಮ ಕೋವಿಡ್ ಸುರಕ್ಷತಾ ಸಮಿತಿ ಮುಖ್ಯಸ್ಥರಾದ ಎನ್ ಇ ಮುಹಮ್ಮದ್, ಉಸ್ತುವಾರಿ ಮುಹಮ್ಮದ್ ಶರೀಫ್, ಬಿಜೆಪಿ ಮುಖಂಡರಾದ ಪ್ರಕಾಶ್ ಆಳ್ವ, ಗ್ರಾಮ ಪಂಚಾಯತ್ ಸದಸ್ಯರಾದ ಸುಮಾ ಅರುಣ್ ಶೆಟ್ಟಿ, ಡಿ. ಅಬುಸಾಲಿ, ಇಲ್ಯಾಸ್ ಪಾದೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಬೊಲ್ಲಂಕಿಣಿ, ಹಸನ್ ಬಾವ, ಸ್ಥಳೀಯ ಮಸ್ಜಿದ್ ಅಧ್ಯಕ್ಷರಾದ ಅಸ್ರಾರುದ್ದೀನ್, ಎನ್ ಎ ಸತ್ತಾರ್ ಸೇರಿದಂತೆ ಸ್ಥಳೀಯ ಗಣ್ಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

