Tuesday, September 1, 2026
spot_imgspot_img
spot_imgspot_img

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ನಡುವಿನ ಜಟಾಪಟಿ; ಶಿಲ್ಪಾ ನಾಗ್ ಗೆ ಡಿಸಿ ರೋಹಿಣಿ ಸಿಂಧೂರಿಯಿಂದ ನೋಟಿಸ್ ಜಾರಿ

- Advertisement -
- Advertisement -

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಜಟಾಪಟಿ ಮುಂದುವರೆದಿದ್ದು, ಶಿಲ್ಪಾ ನಾಗ್‌ ರವರಿಗೆ ಡಿಸಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ.

ಮೈಸೂರು ನಗರಕ್ಕೆ ಸಂಬಂಧಪಟ್ಟಂತೆ ಕೋವಿಡ್ ಕೇರ್ ಸೆಂಟರ್ ತೆರೆಯಲು ವಿಫಲರಾಗಿದ್ದೀರಿ. ಆದರೂ ಜಿಲ್ಲಾಡಳಿತ ಸಹಕಾರ ಕೊಟ್ಟಿಲ್ಲ ಎಂದು ಆರೋಪಿಸಿದ್ದೀರಿ. ಮೈಸೂರಿನಲ್ಲಿ 8535 ಸಕ್ರಿಯ ಪ್ರಕರಣಗಳಿದ್ದರೂ ನಗರದಲ್ಲಿ ಕೊರೋನಾ ನಿಯಂತ್ರಣ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದೀರಿ. ನಿಮ್ಮ ಹೇಳಿಕೆ ತಪ್ಪು ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಎರಡು ದಿನಗಳಲ್ಲಿ ಉತ್ತರ ನೀಡುವಂತೆಯೂ ಸೂಚಿಸಿದ್ದಾರೆ.

ನಿನ್ನೆ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತುರ್ತು ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದಲ್ಲದೆ IAS ಹುದ್ದೆಗೆ ರಾಜಿನಾಮೆ ಕೊಟ್ಟಿದ್ದರು.

- Advertisement -

Related news

error: Content is protected !!