- Advertisement -
- Advertisement -
ವಿಟ್ಲ: ಕೋವಿಡ್ – 19 ಸಾಂಕ್ರಾಮಿಕ ಖಾಯಿಲೆಯು ಹರಡುತ್ತಿರುವ ಹಿನ್ನೆಯಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣದಿಂದ ಜನರು ದಿನ ನಿತ್ಯದ ಅಗತ್ಯ ಆಹಾರ ಸಾಮಾಗ್ರಿಗಳಿಗಾಗಿ ಸಂಕಷ್ಟಪಡುತ್ತಿದ್ದಾರೆ.


ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಮಾಮೇಶ್ವರ ನವಗ್ರಾಮ ಕಾಲೋನಿ, ವಿಟ್ಲ ಮೇಗಿನ ಪೇಟೆಯ ಬಡ ಕುಟುಂಬಗಳಿಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರು , ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಒದಗಿಸಿರುವ ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಅವರವರ ಮನೆಗೆ ತಲುಪಿಸಿ ವಿತರಿಸಿಲಾಯಿತು.



- Advertisement -