Sunday, July 6, 2025
spot_imgspot_img
spot_imgspot_img

ಪತ್ನಿ ಹಾಗೂ ಅತ್ತೆಯ ಬರ್ಬರ ಹತ್ಯೆಗೈದ ಪತಿ..!

- Advertisement -
- Advertisement -

ಹಾಸನ‌: ಜಮೀನಿನಲ್ಲಿ ಮಹಿಳೆಯರಿಬ್ಬರ ಬರ್ಬರ ಹತ್ಯೆಯಾದ ಘಟನೆ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕೊಲೆಯಾದ ದುರ್ದೈವಿಗಳನ್ನು ಮಂಜುಳಾ(28) ಮತ್ತು ಇವರ ತಾಯಿ ಭಾರತಿ(56) ಎಂದು ಗುರುತಿಸಲಾಗಿದೆ. ಮಂಜುಳಾರ ಪತಿ ಶ್ರೀಧರ್ ಕೊಲೆ ಮಾಡಿದ ಆರೋಪಿಯಾಗಿದ್ದು, ಮಂಜುಳಾ ಮತ್ತು ಶ್ರೀಧರ್​ಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಆರಂಭದಲ್ಲಿ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು.

ಗಂಡನಿದ್ದರೂ ಮಂಜುಳಾಗೆ ರಂಗಾಪುರ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧವಿದ್ದು, ಎಷ್ಟೇ ಬುದ್ದಿವಾದ ಹೇಳಿದರೂ ಆಕೆ ಮುಂದುವರಿದ್ದಳಂತೆ. ಇದಕ್ಕೆ ಆಕೆಯ ಅಮ್ಮನ ಸಾಥ್​ ಕೂಡ ಇದ್ದು, ಸೋಮವಾರ ಸಂಜೆ ಜಮೀನು ಬಳಿ ಪ್ರಿಯಕರನೊಂದಿಗೆ ತನ್ನ ಪತ್ನಿ ಇರುವುದನ್ನ ಕಂಡು ಕೋಪಗೊಂಡ ಆಕೆಯ ಗಂಡ ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಕೊಂದು ಅಲ್ಲಿಯೇ ಇದ್ದ ಮಂಜುಳಾರ ತಾಯಿಯನ್ನೂ ಕೊಂದಿದ್ದಾನೆ.

ಅಮ್ಮ-ಮಗಳು ಇಬ್ಬರೂ ರಕ್ತದದ ಮಡುವಿನಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿದ್ದರು. ಸ್ಥಳಕ್ಕೆ ಬಂದ ಗಂಡಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಶ್ರೀಧರ್​ನನ್ನು ಬಂಧಿಸಿದ್ದಾರೆ. ಎಸ್ಪಿ ಶ್ರೀನಿವಾಸಗೌಡ, ಡಿವೈಎಸ್ಪಿ ನಾಗೇಶ್, ಗ್ರಾಮಾಂತರ ಠಾಣೆ ಸಿಪಿಐ ವಸಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪ್ಪ ಜೈಲು ಪಾಲು, ಅಮ್ಮ-ಅಜ್ಜಿ ಮಸಣ ಸೇರಿದರು. ಮಕ್ಕಳಿಬ್ಬರು ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!