ನವದೆಹಲಿ: 2021 ರಲ್ಲಿ ತಿದ್ದುಪಡಿ ಮಾಡಿದ ಗುಜರಾತ್ ಧರ್ಮ ಸ್ವಾತಂತ್ರ್ಯ (ತಿದ್ದುಪಡಿ) ಲವ್ ಜಿಹಾದ್ ಎಂದು ಕರೆಯಲ್ಪಡುವ ಕಾಯ್ದೆಯಡಿ ಗುಜರಾತ್ ಪೊಲೀಸರು ರಾಜ್ಯದಲ್ಲಿ ಮೊದಲ ಎಫ್ ಐ ಆರ್ ದಾಖಲಿಸಿದ್ದಾರೆ.

ಹಲವಾರು ಭಾರತೀಯ ಜನತಾ ಪಕ್ಷದ ಆಡಳಿತದ ರಾಜ್ಯಗಳು ಇತ್ತೀಚೆಗೆ ಅಂಗೀಕರಿಸಿದ್ದು, ಹೊಸದಾಗಿ ರಚಿಸಲ್ಪಟ್ಟ ಕಾನೂನು ಬಲವಂತದ ವಿವಾಹ ಅಥವಾ ಮೋಸದ ಧಾರ್ಮಿಕ ಮತಾಂತರಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತದೆ. ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಕಾನೂನುಗಳು ಸಂಘ ಪರಿವಾರದ ಅಣತಿಯಂತೆ ನಡೆಯುವ ಬಿಜೆಪಿ ಸರಕಾರ ಜಾರಿಗೆ ತಂದಿದೆ.

ಮುಸ್ಲಿಮರು ಹಿಂದೂ ಮಹಿಳೆಯರನ್ನು ವಿವಾಹದ ಮೂಲಕ ಮತಾಂತರಗೊಳಿಸಲು ಸಂಚು ರೂಪಿಸುತ್ತಿದ್ದಾರೆಂದು ಬಿಜೆಪಿ- ಸಂಘಪರಿವಾರ ಆರೋಪಿಸಿದ್ದು, ಈ ಕಾಯ್ದೆಯಡಿಯಲ್ಲಿ ಗುಜರಾತ್‌ನಲ್ಲಿ 3-10 ವರ್ಷಗಳ ಜೈಲು ಶಿಕ್ಷೆ ಮತ್ತು ಆರೋಪಿ ತಪ್ಪಿತಸ್ಥರೆಂದು ಸಾಬೀತಾದರೆ 5 ಲಕ್ಷ ರೂ.ವರೆಗೆ ದಂಡ ವಿಧಿಸುತ್ತಿದ್ದರು.

ತನ್ನ ತಂದೆಯೊಂದಿಗೆ ಮಟನ್ ಅಂಗಡಿಯೊಂದನ್ನು ನಡೆಸುತ್ತಿದ್ದ ಖುರೇಷಿ ಎಂಬ ಯುವಕ ಕ್ರಿಶ್ಚಿಯನ್ ಎಂದು ಹೇಳಿ ತನ್ನ ಜೊತೆ ಸಂಬಂಧ ಬೆಳೆಸಿ ಬಳಿಕ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆಂದು 24 ವರ್ಷದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಆರೋಪಿಸಿದ್ದಳು. ಈ ಘಟನೆಗೆ ಸಂಬಂಧಿಸಿ 6 ಮಂದಿ ವಿರುದ್ಧ ಕೇಸ್ ದಾಖಲಿಸಿ ಇದೀಗ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


