Saturday, June 27, 2026
spot_imgspot_img
spot_imgspot_img

ಅಕ್ರಮವಾಗಿ 8 ಎತ್ತುಗಳ ಸಾಗಾಟ; ಆರೋಪಿಗಳು ಅರೆಸ್ಟ್!

- Advertisement -
- Advertisement -

ಕುಮಟಾ: ಹಿಂಸಾತ್ಮಕವಾಗಿ ಈಚರ್ ಲಾರಿಯಲ್ಲಿ ಸಾಗಿಸುತ್ತಿದ್ದ 8 ಎತ್ತುಗಳಲ್ಲಿ 6 ಎತ್ತುಗಳನ್ನು ರಕ್ಷಿಸಿ, ವಾಹನ ಹಾಗೂ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಹೊಳೆಗದ್ದೆ ಟೋಲ್‍ಗೇಟ್ ಬಳಿ ನಡೆದಿದೆ.

ಮಂಗಳೂರು ಮೂಲದ ರಹೀಂ ಎಮ್.ಡಿ.ಮಹಮ್ಮದ್, ಮಹಮ್ಮದ್ ಆಪ್ರೀದ್, ಮಹಮ್ಮದ್ ಹುಸೇನ, ಮುಜೀಪ ಮುಜಾಮಿಲ್ ಬೆರಪಾರಿ ಹಾಗೂ ಲಾರಿಯ ಮಾಲಿಕ ಬಂಧಿತ ಆರೋಪಿಗಳಾಗಿದ್ದಾರೆ.

ಲಾರಿಯಲ್ಲಿ 8 ಎತ್ತುಗಳನ್ನು ಯಾವುದೇ ಪರವಾನಿಗೆಯಿಲ್ಲದೇ, ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಕುಮಟಾ ಪೂಲೀಸರು ಹೊಳೆಗದ್ದೆ ಟೋಲ್‍ಗೇಟ್ ಬಳಿ ದಾಳಿ ನಡೆಸಿ, ಈಚರ್ ಲಾರಿ ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಿಂಸಾತ್ಮಕವಾಗಿ ಸಾಗಿಸಿದ ಪರಿಣಾಮ ಎರಡು ಎತ್ತುಗಳು ಮೃತಪಟ್ಟಿದ್ದು, ಒಟ್ಟೂ 2.80 ಲಕ್ಷ ರೂ. ಮೌಲ್ಯದ 6 ಎತ್ತುಗಳನ್ನು ಗೋಶಾಲೆಗೆ ರವಾನಿಸಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!