Sunday, June 7, 2026
spot_imgspot_img
spot_imgspot_img

ದ.ಕ ಜಿಲ್ಲೆಯಲ್ಲಿ ನಾಳೆಯಿಂದ ಬೆಳಿಗ್ಗೆ 7ರಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ; ವಾಹನ ಸಂಚಾರಕ್ಕೂ ಅವಕಾಶ

- Advertisement -
- Advertisement -

ಮಂಗಳೂರು: ದ.ಕ ಜಿಲ್ಲೆಯಲ್ಲಿ ನಾಳೆಯಿಂದ ಸಂಜೆ 5 ಗಂಟೆವರೆಗೆ ಅಂಗಡಿ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಇದರ ಜೊತೆಗೆ ಸಂಚಾರ ಮತ್ತು ವ್ಯಾಪಾರ ವಹಿವಾಟುಗಳಿಗೂ ಅವಕಾಶ ನೀಡಿದೆ.

ಕೋವಿಡ್ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವಾರಾಂತ್ಯ ಕರ್ಪ್ಯೂ ಮುಂದುವರಿದೆ.

ನಾಳೆಯಿಂದ ಸಂಜೆ ಐದು ಗಂಟೆಯವರೆಗೆ ವ್ಯಾಪಾರ, ವಹಿವಾಟು ಹಾಗೂ ವಾಹನ ಸಂಚಾರ, ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಆದರೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ವೀಕೆಂಡ್ ಕರ್ಪ್ಯೂ ವೇಳೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗಷ್ಟೇ ಅವಕಾಶ‌. ಇದನ್ನ ಹೊರತುಪಡಿಸಿ ವಾರಾಂತ್ಯ ಎಲ್ಲವೂ ಸಂಪೂರ್ಣ ಬಂದ್.

- Advertisement -

Related news

error: Content is protected !!