- Advertisement -
- Advertisement -
ಪುತ್ತೂರು: ಉತ್ತರಕನ್ನಡ ಬಾಷೆಯ ಡೈಲಾನಿಂದಲೇ ಮನೆಮಾತದ “ಗಿಣಿರಾಮ” ಧಾರಾವಾಹಿಯ ಶಿವರಾಮ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರಾಗಿರುವ ಅವರು ಇದು ನಾಲ್ಕನೇ ಬಾರಿ ಶ್ರೀ ಮಹಾಲಿಂಗೇಶ್ವರನ ದರ್ಶನ ಮಾಡಿದರು. ಕಳೆದೆರಡು ದಿನಗಳಿಂದ ಪುತ್ತೂರಿನಲ್ಲಿಯೇ ಇದ್ದುಕೊಂಡು, ಸಾಹಿತಿ ಡಾ ಶಿವರಾಮ ಕಾರಂತರ ಬಾಲವನ, ಪಂಚಮುಖಿ ಆಂಜನೇಯ ದೇವಾಲಯ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಬಗೆ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.


ಲಾಕ್‌ಡೌನ್ ಸಂದರ್ಭ ಪತ್ನಿಗೆ ಮನೆಕೆಲಸದಲ್ಲಿ ಸಹಕಾರ ನೀಡುವುದರೊಂದಿಗೆ ಒಂದಷ್ಟು ಓದು, ಬರಹ ಹೀಗೆ ಕಾಲ ಕಳೆದಿರೋದನ್ನು ನೆನಪಿಸಿದರು. ಉತ್ತರ ಕನ್ನಡ ಭಾಷೆಯನ್ನು ಒಳಗೊಂಡಿರುವ ಗಿಣಿರಾಮ ಸೀರಿಯಲ್‌ಗೆ ಪುತ್ತೂರಿನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಸಂಭ್ರಮಪಟ್ಟರು.


- Advertisement -