Thursday, June 25, 2026
spot_imgspot_img
spot_imgspot_img

ಮೊದಲ ರಾತ್ರಿಯಂದೇ ಎಸ್ಕೇಪ್ ಆದ ಮದುಮಗಳು..! ಹಣಕ್ಕಾಗಿಯೇ ಮದುವೆ ಪ್ಲ್ಯಾನ್ ಮಾಡಿದ ತಂಡ

- Advertisement -
- Advertisement -

ಮಧ್ಯಪ್ರದೇಶ: ಇದೊಂದು ಎಲ್ಲೂ ಕೇಳಿರದ ವಿಚಿತ್ರ ಘಟನೆ. ಮದುವೆಯಾಗದೇ ಕಂಗಾಲಾಗಿದ್ದ ಯುವಕ ಮದುವೆಯಾದರು ಕಂಗಾಲಾದ ವಿಚಿತ್ರ ಘಟನೆಯಿದು. ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದ ಯುವಕನನ್ನು ಯುವತಿಯೊಬ್ಬಳು ಮದುವೆಯಾಗಿ, ಮೊದಲ ರಾತ್ರಿಯೇ ಎಸ್ಕೇಪ್ ಆಗಿದ್ದಾಳೆ.

ಸೋನು ಜೈನ್ ಎಂಬ ಯುವಕನಿಗೆ ಮದುವೆಯಾಗಲು ಹುಡುಗಿ ಸಿಕ್ಕಿರಲಿಲ್ಲ. ಹುಡುಗಿಗಾಗಿ ಹುಡುಕಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವರೇ ಆದ ಉದಲ್ ಖಾತಿಕ್ ಹುಡುಗಿಯನ್ನು ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ. ಹುಡುಗಿಗಾಗಿ ಪರಿತಪಿಸುತ್ತಿದ್ದ ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ.

ನಂತರ ಉದಲ್ ತನ್ನಿಬ್ಬರು ಸ್ನೇಹಿತರ ಜತೆಗೂಡಿ ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾರೆ. ಆಕೆಯ ಚೆಲುವನ್ನು ನೋಡಿ ಸೋನು ಮಾತ್ರವಲ್ಲದೇ ಆತನ ಪಾಲಕರೂ ಒಪ್ಪಿಕೊಂಡಿದ್ದಾರೆ. ಮಾತುಕತೆಯಂತೆ ಒಂದು ಲಕ್ಷ ರೂಪಾಯಿಯನ್ನು ಉದಲ್ ಮತ್ತು ಆತನ ಸ್ನೇಹಿತರಿಗೆ ಈ ವರ ನೀಡಿದ್ದಾನೆ. ನಂತರ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ. ಫಸ್ಟ್ ನೈಟ್ ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಯಾಕೋ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಬರದಾಗ ವರನಿಗೆ ಭಯವಾಗಿ ಮೇಲೆ ಹೋಗಿ ನೋಡಿದಾಗ ಅಲ್ಲಿ ಆಕೆ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.

ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಬರಲಾಗಿದೆ. ನಂತರ ತಿಳಿದ ವಿಷಯ ಎಂದರೆ, ಹಣಕ್ಕಾಗಿ ಈ ರೀತಿ ಮೋಸ ಮಾಡುವುದು ಈ ಯುವತಿಯ ಗ್ಯಾಂಗ್ ಗೆ ಮಾಮೂಲು ಎನ್ನುವುದು. ಇದಕ್ಕೆ ಸಂಬಂಧಿಸಿದಂತೆ ಐದು ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಮೂರು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

- Advertisement -

Related news

error: Content is protected !!