Monday, September 21, 2026
spot_imgspot_img
spot_imgspot_img

ಸುಳ್ಯ: ಟಾಟಾ ಏಸ್ ಹಾಗೂ ಪಿಕಪ್ ವಾಹನ ಮುಖಾಮುಖಿ ಡಿಕ್ಕಿ; ತೋಡಿಗೆ ಉರುಳಿದ ಟಾಟಾ ಏಸ್!

- Advertisement -
- Advertisement -
driving

ಸುಳ್ಯ: ಮೀನು ಸಾಗಾಟದ ಟಾಟಾ ಏಸ್ ಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನ ತೋಡಿಗೆ ಉರುಳಿದ ಬಿದ್ದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಸುಳ್ಯದಿಂದ ಕನಕಮಜಲಿಗೆ ಮೀನು ಸಾಗಾಟ ಮಾಡಲು ಹಳೆಗೇಟಿನ ಉಮ್ಮರ್ ಎಂಬವರು ಟಾಟಾ ಏಸ್ ಚಲಾಯಿಸುತ್ತಿದ್ದರು.

ಇದನ್ನೂ ಓದಿ: ಬಂಟ್ವಾಳ: ಹೆಂಡತಿಯೊಂದಿಗೆ ಅನೈತಿಕ‌ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನು ಬರ್ಬರವಾಗಿ ಹತ್ಯೆಗೈದ ಅಣ್ಣ!

ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಪಿಕಪ್ ಕದಿಕಡ್ಕದ ಕಿರುಸೇತುವೆಯ ಬಳಿ ಟಾಟಾ ಏಸ್ ಗೆ ರಭಸವಾಗಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಟಾಟಾ ಏಸ್ ವಾಹನ ಸೇತುವೆ ಮೇಲಿನಿಂದ ತೋಡಿಗೆ ಉರುಳಿ ಬಿದ್ದಿದೆ.

ಘಟನೆಯಿಂದಾಗಿ ಚಾಲಕ ಉಮ್ಮರ್ ಅವರ ಕಾಲಿಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!