- Advertisement -
- Advertisement -


ದಾವಣಗೆರೆ: ಕೋಳಿ ಫಾರಂಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆಯ 1 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ಅಪರಾಧಿಗೆ 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೋಳಿ ಫಾರಂ ಮಾಲೀಕ ನಿಜಾಮುದ್ದೀನ್ (46)ಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೋಗುದ್ದ ಗ್ರಾಮದಲ್ಲಿ ಈ ಅಕ್ರಮ ತಿಳಿದುಬಂದಿತ್ತು. ಅಪರಾಧಿ ಕೋಳಿ ಫಾರಂನ 4 ಶೆಡ್ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದ. 1 ವರ್ಷ ಕಾಲ 96,000 ವ್ಯಾಟ್ ವಿದ್ಯುತ್ ಬಳಸಿಕೊಂಡಿದ್ದ. ಬಳಿಕ, ಈ ಅಕ್ರಮವನ್ನು ಬೆಸ್ಕಾಂ ಎಇಇ ಜಿ.ಎಂ. ನಾಯ್ಕ್ ದಾಳಿ ನಡೆಸಿ ಪತ್ತೆ ಹಚ್ಚಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇಂದು ನ್ಯಾಯಾಧೀಶ ಜೆ.ವಿ. ವಿಜಯಾನಂದ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು. ಅದರಂತೆ ಅಪರಾಧಿಗೆ ಶಿಕ್ಷೆ ಘೋಷಣೆಯಾಗಿದೆ. 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.





- Advertisement -