- Advertisement -
- Advertisement -
ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 ಮೀಟರ್ ಏರ್ ರೈಫಲ್ನಲ್ಲಿ ಕಂಚಿನ ಪದಕ ಸಂಪಾದಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಅವನಿ ಈ ಹಿಂದೆ 10 ಮೀಟರ್ ಏರ್ ರೈಫಲ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಭಾರತದ ಪದಕ 12ಕ್ಕೆ ಏರಿಕೆಯಾಗಿದೆ.
19 ವರ್ಷ ಪ್ರಾಯದ ಜೈಪುರದ ಈ ಆಟಗಾರ್ತಿ ಪ್ಯಾರಾಲಿಂಪಿಕ್ನಲ್ಲಿ ಭರ್ಜರಿ ಸಾಧನೆಗೈದಿದ್ದಾರೆ. ಟೋಕಿಯೋ ಗೇಮ್ನಲ್ಲಿ ಅವನಿ ಇನ್ನೂ ಒಂದು ಆಟದಲ್ಲಿ ಪ್ರದರ್ಶನ ನೀಡಬೇಕಿದೆ. ಈ ಸ್ಪರ್ಧೆಯಲ್ಲೂ ಅವನಿ ಪದಕ ಸಂಪಾದಿಸುವಲ್ಲಿ ಯಶಸ್ವಿಯಾದಲ್ಲಿ ಒಂದೇ ಪ್ಯಾರಾಲಿಂಪಿಕ್ನಲ್ಲಿ ಮೂರು ಪದಕಗಳನ್ನು ಸಂಪಾದಿಸಿದ ಭಾರತದ ಮೊದಲ ವನಿತೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
- Advertisement -