Tuesday, April 30, 2024
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಧಾರ್ಮಿಕ ಕಟ್ಟಡಗಳ ತೆರವಿಗೆ ರಾಜ್ಯ ಸರ್ಕಾರದಿಂದ ಲಿಸ್ಟ್ ರೆಡಿ

- Advertisement -G L Acharya panikkar
- Advertisement -
driving

ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ, ಹಲವಾರು ಆಕ್ರೋಶ ಪ್ರತಿಭಟನೆಯ ಬಿಸಿ ತಟ್ಟಿರುವ ಮೈಸೂರು ಅನಧಿಕೃತ ದೇವಾಲಯವನ್ನು ಕೆಡವಿದ ಪ್ರಕರಣದ ಬೆನ್ನಲ್ಲೇ, ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ದೇವಾಲಯಗಳ ತೆರವಿಗೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೊಂದು ಹರಿದಾಡುತ್ತಿದ್ದೂ, ಕೆಡವುವ ದೇವಾಲಯಗಳ ಪಟ್ಟಿ ಸಿದ್ಧಾವಾಗಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯ ಪ್ರಕಾರ 2009 ರ ಹಿಂದಿನ ಸುಮಾರು 902 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗುತ್ತಿದ್ದು, ಇದರಲ್ಲಿ ದೇವಸ್ಥಾನಗಳು-667, ಮಸೀದಿಗಳು-186, ಚರ್ಚ್-56, ಇತರೆ ಧಾರ್ಮಿಕ ಕಟ್ಟಡಗಳು-11

ಮಂಗಳೂರಿನ ಶಕ್ತಿನಗರದಲ್ಲಿರುವ
700 ವರ್ಷಗಳ ಹಿಂದಿನ‌ ದೈವಸ್ಥಾನವೂ ತೆರವು. ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮಂಡಳಿಗೆ ಇನ್ನೂ ಮಾಹಿತಿ ದೊರೆತಿಲ್ಲ.

ತೆರವುಗೊಳಿಸಲು ಬಾಕಿ ಇರುವ ಕಟ್ಟಡಗಳ ಸಂಖ್ಯೆ 920, ಇದರಲ್ಲಿ ಸುಮಾರು 400 ಕಟ್ಟಡಗಳು ರೆಗ್ಯುಲೈಸ್ಡ್ ಆಗುವ ಸಾದ್ಯತೆಗಳಿವೆ.

2009 ರ ಈಚೆಗೆ ನಿರ್ಮಾಣ ಆದ ಕಟ್ಟಡಗಳ ಬಗ್ಗೆ ಸರ್ವೆ ಮುಂದುವರಿದಿದೆ. ಈ ಬಗ್ಗೆ ಜಿಲ್ಲಾಡಳಿತ‌ ಮಾಹಿತಿ ಪಡೆದುಕೊಳ್ಳುತ್ತಿದೆ.

ರಾಜ್ಯ ಸರ್ಕಾರದ ಪ್ರಕಾರ ಅನಧಿಕೃತ ಹಳೇ ಕಟ್ಟಡಗಳ ತೆರವು ಕಾರ್ಯವಾಗಿದ್ದರೆ, ಇದೊಂದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕಾರ್ಯ ಎಂದು ಸಂಘಟನೆಗಳು ವಿರೋಧಿಸುತ್ತಿವೆ. ಅದರಲ್ಲೂ ಹಿಂದೂ ಪರ, ಹಿಂದುತ್ವದ ಸರ್ಕಾರವಾದ ಬಿಜೆಪಿ ಅಧಿಕಾರದಲ್ಲಿರುವಾಗಲೇ ಈ ರೀತಿಯ ಅಧಿಕಾರ ಜನರನ್ನು ಚಿಂತೆಗೀಡುಮಾಡಿದೆ.

- Advertisement -

Related news

error: Content is protected !!