Thursday, July 23, 2026
spot_imgspot_img
spot_imgspot_img

ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಬೇಧಿಸಿದ ಪೊಲೀಸರು; ಸುರಂಗದಿಂದ ಬಂದ ಸುಂದರಿಯರು!

- Advertisement -
- Advertisement -

ತುಮಕೂರು: ಲಾಡ್ಜ್‌ನಲ್ಲಿ ಸುರಂಗ ಕೊರೆದು ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಮೈಸೂರಿನ ಒಡನಾಟಿ ಸಂಸ್ಥೆ ಹಾಗೂ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಪೊಲೀಸರು ತುಮಕೂರಿನ ಕ್ಯಾತಸಂದ್ರ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ಆದರೆ ಈ ವೇಳೆಯಲ್ಲಿ ಲಾಡ್ಜ್ ನಲ್ಲಿ ಯಾರೊಬ್ಬರೂ ಕೂಡ ಇರಲಿಲ್ಲ. ಅನುಮಾನಗೊಂಡು ಪೊಲೀಸರು ಮೀರರ್ ಸ್ಟ್ಯಾಂಡ್ ಓಪನ್‌ ಮಾಡಿದ್ದಾರೆ. ಆಗ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಬಯಲಿಗೆ ಬಂದಿದೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್‌ ಮಾಲೀಕ ಲಾಡ್ಜ್‌ನೊಳಗೆ ಸುರಂಗ ಕೊರೆದು ಯುವಕ, ಯುವತಿಯರನ್ನು ಬಚ್ಚಿಟ್ಟಿದ್ದ. ಆದರೆ ಪೊಲೀಸರು ಜಾಲವನ್ನು ಬೇಧಿಸಿ, ಯುವತಿಯರು, ಪುರುಷರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!