Sunday, July 6, 2025
spot_imgspot_img
spot_imgspot_img

ಜಲ್ ಜೀವನ್ ಮಿಷನ್: ಗ್ರಾಮ ಪಂಚಾಯತ್ ಪಾನಿ ಸಮಿತಿಗಳ ಜತೆ ಇಂದು ಪ್ರಧಾನಿ ಮೋದಿ ಸಂವಾದ

- Advertisement -
- Advertisement -
driving

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಜಲ ಜೀವನ್ ಮಿಷನ್ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ (VWSC) ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ. ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಲು ಮತ್ತು ಮಿಷನ್ ಅಡಿಯಲ್ಲಿ ಯೋಜನೆಗಳ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ಜಲ ಜೀವನ ಮಿಷನ್ ಆಪ್ ಅನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ (PMO) ಹೇಳಿಕೆಯಲ್ಲಿ ತಿಳಿಸಿದೆ.

ಇಂದು ನಡೆಯುವ ಕಾರ್ಯಕ್ರಮದಲ್ಲಿ ಮೋದಿ ರಾಷ್ಟ್ರೀಯ ಜಲ ಜೀವನ್ ಕೋಶ್ ಗೆ ಚಾಲನೆ ನೀಡಲಿದ್ದಾರೆ. ಅಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ಕಾರ್ಪೊರೇಟ್ ಅಥವಾ ಲೋಕೋಪಕಾರಿ, ಭಾರತ ಅಥವಾ ವಿದೇಶದಲ್ಲಿರಲಿ, ಪ್ರತಿ ಗ್ರಾಮೀಣ ಮನೆ, ಶಾಲೆ, ಅಂಗನವಾಡಿ ಕೇಂದ್ರ, ಆಶ್ರಮ ಮತ್ತು ಇತರ ಸಾರ್ವಜನಿಕರಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲು ಸಹಾಯ ಮಾಡಬಹುದಾಗಿದೆ. ಜಲ ಜೀವನ್ ಮಿಷನ್​​ನಲ್ಲಿ ರಾಷ್ಟ್ರವ್ಯಾಪಿ ಗ್ರಾಮ ಸಭೆಗಳು ಹಗಲು ನಡೆಯಲಿವೆ ಎಂದು ಪಿಎಂಒ ತಿಳಿಸಿದೆ.

ಗ್ರಾಮ ಸಭೆಗಳು ಹಳ್ಳಿಯ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ ಮತ್ತು ನಿರ್ವಹಣೆಯ ಬಗ್ಗೆ ಚರ್ಚಿಸುತ್ತವೆ ಮತ್ತು ದೀರ್ಘಾವಧಿಯ ನೀರಿನ ಭದ್ರತೆಗೆ ಕೆಲಸ ಮಾಡುತ್ತವೆ. ಹಳ್ಳಿ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ, ಅನುಷ್ಠಾನ, ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ‘ಪಾನಿ ಸಮಿತಿ’ಗಳು ಪ್ರಮುಖ ಪಾತ್ರವಹಿಸುತ್ತವೆ. ಆ ಮೂಲಕ ಪ್ರತಿ ಮನೆಗೆ ನಿಯಮಿತವಾಗಿ ಮತ್ತು ದೀರ್ಘಾವಧಿಯಲ್ಲಿ ಶುದ್ಧವಾದ ನಲ್ಲಿ ನೀರನ್ನು ಒದಗಿಸುತ್ತವೆ.

ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳಲ್ಲಿ, ಪಾನಿ ಸಮಿತಿಗಳು ಅಥವಾ ವಿಡಬ್ಲ್ಯೂಎಸ್‌ಸಿಗಳನ್ನು ಸುಮಾರು 3.5 ಲಕ್ಷ ಗ್ರಾಮಗಳಲ್ಲಿ ರಚಿಸಲಾಗಿದೆ. 7.1 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಫೀಲ್ಡ್ ಟೆಸ್ಟ್ ಕಿಟ್ ಬಳಸಿ ನೀರಿನ ಗುಣಮಟ್ಟ ಪರೀಕ್ಷಿಸಲು ತರಬೇತಿ ನೀಡಲಾಗಿದೆ.

ಆಗಸ್ಟ್ 15, 2019 ರಂದು ಪ್ರಧಾನಿ ಮೋದಿ ಅವರು ಜಲ ಜೀವನ ಮಿಷನ್ ಮೂಲಕ ಪ್ರತಿ ಮನೆಗೆ ಶುದ್ಧವಾದ ನಲ್ಲಿ ನೀರನ್ನು ಒದಗಿಸುವುದಾಗಿ ಘೋಷಿಸಿದರು. ಮಿಷನ್ ಆರಂಭದ ಸಮಯದಲ್ಲಿ ಕೇವಲ 3.23 ಕೋಟಿ (17 ಶೇಕಡಾ) ಗ್ರಾಮೀಣ ಕುಟುಂಬಗಳಿಗೆ ಮಾತ್ರ ನೀರು ಸರಬರಾಜು ಮಾಡಿದ್ದರು.

ಕೊವಿಡ್ ಸಾಂಕ್ರಾಮಿಕದ ಹೊರತಾಗಿಯೂ ಕಳೆದ ಎರಡು ವರ್ಷಗಳಲ್ಲಿ ಐದು ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ ಸುಮಾರು 8.26 ಕೋಟಿ (43 ಶೇಕಡಾ) ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಲ್ಲಿ ನಲ್ಲಿ ನೀರು ಪೂರೈಕೆಯನ್ನು ಹೊಂದಿವೆ ಎಂದು ಅದು ಹೇಳಿದೆ. 78 ಜಿಲ್ಲೆಗಳು, 58,000 ಗ್ರಾಮ ಪಂಚಾಯಿತಿಗಳು ಮತ್ತು 1.16 ಲಕ್ಷ ಗ್ರಾಮಗಳಲ್ಲಿನ ಪ್ರತಿ ಗ್ರಾಮೀಣ ಕುಟುಂಬವು ನಲ್ಲಿ ನೀರು ಪೂರೈಕೆಯನ್ನು ಪಡೆಯುತ್ತಿದೆ ಎಂದು ಪಿಎಮ್ಒ ಹೇಳಿದೆ.

ಇಲ್ಲಿಯವರೆಗೆ 7.72 ಲಕ್ಷ (76 ಪ್ರತಿಶತ) ಶಾಲೆಗಳು ಮತ್ತು 7.48 ಲಕ್ಷ (67.5 ಶೇಕಡಾ) ಅಂಗನವಾಡಿ ಕೇಂದ್ರಗಳಲ್ಲಿ ನಲ್ಲಿ ನೀರು ಸರಬರಾಜನ್ನು ಒದಗಿಸಲಾಗಿದೆ ಎಂದು ಅದು ಹೇಳಿದೆ.

ಪ್ರಧಾನ ಮಂತ್ರಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಮತ್ತು ‘ಬಾಟಮ್ ಅಪ್’ ವಿಧಾನವನ್ನು ಅನುಸರಿಸಲು, ಜಲ ಜೀವನ ಮಿಷನ್ ಅನ್ನು ರಾಜ್ಯಗಳ ಸಹಭಾಗಿತ್ವದಲ್ಲಿ ರೂ. 3.60 ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ.

ಇದಲ್ಲದೆ, 2021-22 ರಿಂದ 2025-26 ರ ಅವಧಿಯಲ್ಲಿ ನೀರು ಮತ್ತು ನೈರ್ಮಲ್ಯಕ್ಕಾಗಿ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ರೂ1.42 ಲಕ್ಷ ಕೋಟಿಗಳನ್ನು ಅನುದಾನವಾಗಿ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!