Wednesday, June 17, 2026
spot_imgspot_img
spot_imgspot_img

ಮಂಗಳೂರು: ಏರ್ ಪೋರ್ಟ್’ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಸುಗಂಧ ದ್ರವ್ಯ ಸ್ಮಗ್ಲಿಂಗ್

- Advertisement -
- Advertisement -

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಸುಗಂಧ ದ್ರವ್ಯವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ. ದುಬೈನಿಂದ ಬಂದಿಳಿದ ಭಟ್ಕಳ ಮೂಲದ ವ್ಯಕ್ತಿಯನ್ನು ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಸುಗಂಧ ದ್ರವ್ಯಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಯಿಂದ 24 ಕ್ಯಾರೆಟ್ ನ 201.200 ಗ್ರಾಂ ತೂಕದ 9,57,712 ರೂ. ಮೌಲ್ಯದ ಚಿನ್ನದ ಬಿಲ್ಲೆಗಳು, 24 ಗ್ರಾಂ ತೂಕದ 1,04,640 ರೂ. ಮೌಲ್ಯದ ಚಿನ್ನದ ನಾಣ್ಯಗಳು, 1,02,600 ರೂ. ಮೌಲ್ಯದ ಆ್ಯಪಲ್ ಐಫೋನ್, 1,69,500 ರೂ. ಮೌಲ್ಯದ ಸುಗಂಧ ದ್ರವ್ಯದ 12 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!