Sunday, September 6, 2026
spot_imgspot_img
spot_imgspot_img

ಬೆಳ್ತಂಗಡಿ: ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ; ಬೆಚ್ಚಿಬಿದ್ದ ಸ್ಥಳೀಯರು!

- Advertisement -
- Advertisement -
driving

ವೇಣೂರು: ತಾಲೂಕಿನ ವೇಣೂರಿನಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತವ್ಯಕ್ತಿ ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ(60) ಎನ್ನಲಾಗಿದೆ.

ಕೂಲಿ ಕಾರ್ಮಿಕರಾಗಿರುವ ಸಂಜೀವ ಶೆಟ್ಟಿಯವರು ಮನೆಯಲ್ಲಿ ಒಬ್ಬರೇ ವಾಸ್ತವ್ಯವಿದ್ದರು. ಸಂಜೀವ ಶೆಟ್ಟಿಯವರ ಜೊತೆಗೆ ಪ್ರತಿದಿನವೂ ತೋಟದ ಕೆಲಸಕ್ಕೆಂದು ಜೊತೆಯಾಗಿ ಹೋಗುತ್ತಿದ್ದ ಇನ್ನೋರ್ವರು ಇಂದು ಬೆಳಿಗ್ಗೆ ಸುಮಾರು ಹೊತ್ತಿನವರೆಗೂ ಕೆಲಸಕ್ಕೆ ಬಾರದಿರುವುದನ್ನು ಕಂಡು ವಿಚಾರಿಸುವುದಕ್ಕೆಂದು ಮನೆಗೆ ತೆರಳಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಈ ಘಟನೆಗೆ ಕಾರಣವೇನೆಂದು ತಿಳಿದುಬರಬೇಕಿದೆ.

- Advertisement -

Related news

error: Content is protected !!