Wednesday, July 2, 2025
spot_imgspot_img
spot_imgspot_img

ಕಣಿವೆ ನಾಡಿನಲ್ಲಿ 5 ಭಯೋತ್ಪಾದಕರು ಉಡೀಸ್

- Advertisement -
- Advertisement -
driving

ನವದೆಹಲಿ: ಲಷ್ಕರ್-ಎ-ತೊಯ್ಬಾ -ರೆಸಿಸ್ಟೆನ್ಸ್ ಫ್ರಂಟ್ ನೊಂದಿಗೆ ಸಂಪರ್ಕ ಹೊಂದಿದ ಒಟ್ಟು ಐದು ಭಯೋತ್ಪಾದಕರು ನಿನ್ನೆ ಜಮ್ಮು & ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೀಡಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೆ ಉಗ್ರರ ಎನ್‌ಕೌಂಟರ್ ನಡೆದಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಕಡೆ ಅಂದರೆ ದೆಹಲಿ ವಿಶೇಷ ಪೊಲೀಸ್ ದಳ ಪಾಕಿಸ್ತಾನಿ ಉಗ್ರನನ್ನ ಬಂಧಿಸಿದ್ದಾರೆ. ಬಂಧಿತನಿಂದ ಒಂದು ಎಕೆ-47 ಗನ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ತನಿಖಾ ದಳ ದೇಶದ 40ಕ್ಕೂ ಹೆಚ್ಚು ಭಾಗಗಳಲ್ಲಿ ದಾಳಿ ಮಾಡಿದೆ.

- Advertisement -

Related news

error: Content is protected !!