- Advertisement -
- Advertisement -



ಪುತ್ತೂರು: ಅಮರ್ ಜವಾನ್ ಸ್ಮಾರಕ ಜ್ಯೋ ತಿ ಬಳಿ ಪುತ್ತೂರು ವಿಭಾಗ ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಸದಸ್ಯರು ನಡೆಸುತ್ತಿರುವ ಮೌನ ಧರಣಿ ಸತ್ಯಾಗ್ರಹ ಅ.22ರಂದು ಎರಡನೇ ದಿನವೂ ಮುಂದುವರಿದಿದೆ.
ವೇತನ ಮತ್ತು ನಿವೃತ್ತಿ ನೌಕರರ ಸೇರಿದಂತೆ ಇತರ ಸೌಲಭ್ಯಗಳ ಬೇಡಿಕೆ ಮುಂದಿಟ್ಟು ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಈ ಮೌನ ಧರಣಿ ಸತ್ಯಾಗ್ರಹ ನಡೆಯುತ್ತಿದೆ.


ಈ ವೇಳೆ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ್ ರೈ, ಹುತಾತ್ಮ ಸೈನಿಕರ ಸ್ಮಾರಕಕ್ಕೆ ಹೂಮಾಲೆ ಅರ್ಪಿಸಿ 2ನೇ ದಿನದ ಧರಣಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಘದ ಅಧ್ಯ ಕ್ಷ ಶ್ರೀ ಗಿರೀಶ್ ಮಳಿ, ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ , ರಾಮಚಂದ್ರ ಅಡಪ, ಮಾಬಲ ಗಡಿಮಾರು, ಶಾಂತಪ್ಪ , ಶ್ರೀಧರ್, ಸುನಿಲ್, ಪಿ.ಆರ್. ಆನಂದ ಮತ್ತಿತರರು ಉಪಸ್ಥಿತರಿದ್ದರು.




- Advertisement -