Monday, June 15, 2026
spot_imgspot_img
spot_imgspot_img

ಬಹು ನಿರೀಕ್ಷಿತ ಚಲನಚಿತ್ರ “ಚಾರ್ಲಿ” ಚಿತ್ರೀಕರಣ ಮುಕ್ತಾಯ; ವರ್ಷಂತ್ಯಕ್ಕೆ ತೆರೆಮೇಲೆ.!

- Advertisement -
- Advertisement -

ಸ್ಯಾಂಡಲ್‍ವುಡ್‍ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ” ಚಾರ್ಲಿ 777″ ಚಿತ್ರ ಪಂಚ ಭಾಷೆಗಳಲ್ಲಿ ಡಿಸೆಂಬರ್ 31ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಭಾರಿ ಸದ್ದು ಮಾಡಿದ್ದು, ಸಿನಿ ರಸಿಕರಿಗೆ ಚಿತ್ರದ ಮೇಲೆ ಭಾರಿ ನಿರೀಕ್ಷೆಹುಟ್ಟಿಸಿದೆ.


ನಟ ರಕ್ಷಿತ್ ಶೆಟ್ಟಿ ಅವರು ಸಿನಿಮಾದ ಬಗ್ಗೆ ಸ್ವಾರಸ್ಯಕರ ಮಾಹಿತಿಗಳನ್ನು ಹೊರಹಾಕಿದ್ದು, “164 ದಿನಗಳ ಶೂಟಿಂಗ್‍ಗೆ ಪೂರ್ಣ ವಿರಾಮ ಇಡುತ್ತಿದ್ದೇವೆ. ಚಾರ್ಲಿ ಸಿನಿಮಾದ ಅದ್ಬುತ ಪಯಣವನ್ನು ಕುಂಬಳಕಾಯಿ ಒಡೆಯುವುದರ ಮೂಲಕ ಮುಗಿಸಿದ್ದೇವೆ. ಡಿಸೆಂಬರ್ 31ರಂದು ಚಿತ್ರ ಮಂದಿರದಲ್ಲಿ ಭೇಟಿಯಾಗೋಣ” ಎಂದರು .

ಈ ಚಿತ್ರದ ಟಾರ್ಚರ್ ಹಾಡು ಇತ್ತೀಚೆಗಷ್ಟೆ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಐದು ಭಾಷೆಗಳಲ್ಲಿಯೂ ಪ್ರಸಿದ್ದ ಹಿನ್ನೆಲೆ ಗಾಯಕರು ಹಾಡಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಹಾಡಿದ್ದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್ ಧ್ವನಿ ನೀಡಿದ್ದಾರೆ.

ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿದ್ದು, ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಯುವ ನಿರ್ದೇಶಕ ಕಿರಣ್ ರಾಜ್ ನಿರ್ದೇಶಿಸಿದ್ದಾರೆ. ರಾಜ್ ಬಿ, ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

- Advertisement -

Related news

error: Content is protected !!