Friday, July 4, 2025
spot_imgspot_img
spot_imgspot_img

ಆನ್‌ಲೈನ್ ಗೇಮಿಂಗ್ ಟೋಕನ್‌ ವಿವಾದ; 16 ವರ್ಷದ ಬಾಲಕನಿಂದ 12ರ ಬಾಲಕನ ಹತ್ಯೆ

- Advertisement -
- Advertisement -
vtv vitla
vtv vitla

ರಾಜಸ್ಥಾನ: ರಾಜಸ್ಥಾನದ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ಆನ್‌ಲೈನ್ ಗೇಮ್‌ಗಳ ರಿಚಾರ್ಜ್ ಟೋಕನ್ ಪಾವತಿ ವಿಚಾರದಲ್ಲಿ ನಡೆದ ಜಗಳದಲ್ಲಿ 16 ವರ್ಷದ ಬಾಲಕನೋರ್ವ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತು ಹಿಸುಕಿ ಹತ್ಯೆಗೈದು ಹೊಲದಲ್ಲಿ ಹೂತು ಹಾಕಿರುವ ಘಟನೆ ನಡೆದಿದೆ.

vtv vitla

12 ವರ್ಷದ ಬಾಲಕ ನಾಪತ್ತೆಯಾಗಿರುವ ಕುರಿತು ಆತನ ಚಿಕ್ಕಪ್ಪ ದೂರು ನೀಡಿದ್ದು, ಮೊಬೈಲ್‌ನಲ್ಲಿ ಪಬ್ ಜಿ ಮತ್ತು ಇತರ ಆನ್‌ಲೈನ್ ಆಟಗಳನ್ನು ಸೋದರ ಸಂಬಂಧಿಗಳು ಒಟ್ಟಿಗೆ ಆಟವಾಡುತ್ತಿದ್ದರು ಎಂದು ಅವರು ತಿಳಿಸಿದ್ದು, ಇದರಿಂದ ಪೊಲೀಸರು 16 ವರ್ಷದ ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾಗ , ಇಬ್ಬರೂ ಆನ್‌ಲೈನ್ ಗೇಮ್‌ಗಳನ್ನು ಆಡುವಾಗ ಹಣಕ್ಕಾಗಿ ಜಗಳವಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇನ್ನು ಆನ್‌ಲೈನ್ ಗೇಮಿಂಗ್ ಟೋಕನ್‌ಗಳನ್ನು ಖರೀದಿಸಲು ಅವನು ತನ್ನ ಸೋದರ ಸಂಬಂಧಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದು, ಅದನ್ನು ಹಿಂದಿರುಗಿಸದಿದ್ದುದರಿಂದ ಜಗಳ ನಡೆದು ಸಿಟ್ಟಿಗೆದ್ದು 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!