- Advertisement -
- Advertisement -


ಪುತ್ತೂರು: ರಿಕ್ಷಾ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಡಿ.27ರಂದು ಮಧ್ಯರಾತ್ರಿ ನರಿಮೊಗರು ಸಮೀಪ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್ ಚಡಗ ಅವರು ಮಧ್ಯರಾತ್ರಿಯ ದೇವಸ್ಥಾನದಿಂದ ಅವರ ಮನೆ ಆರ್ಯಾಪು ಕಡೆ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ, ಸಂಪ್ಯದಿಂದ ಭಕ್ತಕೋಡಿಗೆ ಹೋಗುತ್ತಿದ್ದ ರಝಾಕ್ ಹಾಗೂ ಅವರ ಕುಟುಂಬವಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮಧುಸೂದನ್ ಅವರು ಗಂಭೀರ ಗಾಯಗೊಂಡಿದ್ದು, ರಝಾಕ್ ಅವರ ಮೇಲೆಯೇ ರಿಕ್ಷಾ ಪಲ್ಟಿಯಾಗಿದೆ. ತಕ್ಷಣವೇ ಸ್ಪಂದಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಧುಸೂದನ್ ಹಾಗೂ ರಝಾಕ್ ಇಬ್ಬರನ್ನೂ ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಧುಸೂದನ್ ಅವರ ಕೈಗೆ ಹಾಗೂ ಕಾಲಿಗೂ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಕೂಡಲೇ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.



- Advertisement -








