Sunday, June 29, 2025
spot_imgspot_img
spot_imgspot_img

ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ ನೀಡಿ ವಂಚಿಸುತ್ತಿದ್ದ ಆರೋಪಿ ಅರೆಸ್ಟ್!

- Advertisement -
- Advertisement -
suvarna gold

ಬೆಂಗಳೂರು: ಐಬಿಎಂ ಕಂಪನಿಯ ನಕಲಿ ಜಾಬ್ ಲೆಟರ್ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ಸಂಜೀವ್ ಗಂಗರಾಮ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ. ಒಬ್ಬೊಬ್ಬರಿಂದ 15 ರಿಂದ 50 ಸಾವಿರದ ವರೆಗೆ ಹಣ ಪಡೆಯುತ್ತಿದ್ದ. ಇದುವರೆಗೆ ಸುಮಾರು 40 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಐಬಿಎಂ ಹೆಚ್ಆರ್ ಅಭಿಜಿತ್ ರಾಯ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

vtv vitla
vtv vitla

ಆರೋಪಿ ಜಾಬ್ ಆಫರ್ ಬಗ್ಗೆ ಒಎಲ್ಎಕ್ಸ್ನಲ್ಲಿ ಜಾಹಿರಾತು ನೀಡುತ್ತಿದ್ದ. ಸಂಪರ್ಕ ಮಾಡಿದವರಿಗೆ ಐಬಿಎಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ವಿವಿಧ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದ. ನಂತರ ಐಬಿಎಂ ಹೆಸರು ಹಾಗೂ ಲೋಗೊ ಬಳಸಿಕೊಂಡು ಜಾಬ್ ಆಫರ್ ಲೆಟರ್ ಕಳಿಸುತ್ತಿದ್ದ. ಐಬಿಎಂ ಹೆಚ್ ಆರ್ ಪ್ರದೀಪ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದ. ಈತನ ಮಾತು ನಂಬಿ ಐಬಿಎಂ ಕಂಪನಿಗೆ ಹೋದಾಗ ಅಸಲಿಯತ್ತು ಬಯಲಿಗೆ ಬಂದಿದೆ.

ಆರೋಪಿ ಹೇಳುತ್ತಿದ್ದ ಪ್ರದೀಪ್ ಎಂಬ ಹೆಸರಿನ ಹೆಚ್ ಆರ್ ಕಂಪನಿಯಲ್ಲಿ ಇಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಮೋಸ ಹೋಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಐಬಿಎಂ ಹೆಚ್ ಆರ್ ಅಭಿಜಿತ್ ರಾಯ್ ದೂರು ದಾಖಲಿಸಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Related news

error: Content is protected !!