Tuesday, July 8, 2025
spot_imgspot_img
spot_imgspot_img

ಸಣ್ಣದಾಗುತ್ತಿದೆ ನಾವು ಸಾಕುವ ಮಾರ್ಜಾಲದ ಮೆದುಳಿನ ಗಾತ್ರ..!

- Advertisement -
- Advertisement -

ನಮ್ಮ ಮನೆಯಲ್ಲಿರುವ ಬೆಕ್ಕುಗಳ ಮೆದುಳಿನ ಗಾತ್ರ ಕಡಿಮೆಯಾಗುತ್ತಿದೆ ಎಂದು ರಾಯಲ್ ಸೊಸೈಟಿ ಓಪನ್ ಸೈನ್ಸ್ ಜರ್ನಲ್ ತಾನು ಪ್ರಕಟಿಸಿರುವ ವರದಿಯಲ್ಲಿ ತಿಳಿಸಿದೆ. ಕಾಡು ಬೆಕ್ಕುಗಳ ಮೆದುಳಿಗಿಂತ ನಾವು ಮನೆಯಲ್ಲಿ ಸಾಕುವ ಬೆಕ್ಕುಗಳ ಮೆದುಳು ಸಣ್ಣದು ಎಂದು ಸಂಶೋಧಕರು ವಿವರಿಸಿದ್ದಾರೆ.

ಸಂಶೋಧಕರು ಸಾಕು ಬೆಕ್ಕುಗಳ ಮೆದುಳಿನ ಗಾತ್ರ ಮತ್ತು ಕಾಡು ಬೆಕ್ಕುಗಳ ಮೆದುಳಿನ ಗಾತ್ರವನ್ನು ಹೋಲಿಕೆ ಮಾಡಿ ನೋಡಿದ್ದಾರೆ. ಅದರಲ್ಲಿ ಸಾಕು ಬೆಕ್ಕುಗಳ ಮೆದುಳ ಗಾತ್ರ ಕಡಿಮೆಯಿರುವುದು ಗೊತ್ತಾಗಿದೆ. ಹಾಗೆಯೇ ಕಳೆದ 10 ಸಾವಿರ ವರ್ಷಗಳಲ್ಲಿ ಬೆಕ್ಕುಗಳ ಮೆದುಳಿನ ಗಾತ್ರ ಕಡಿಮೆಯಾಗುತ್ತಾ ಬಂದಿರುವುದೂ ತಿಳಿದುಬಂದಿದೆ.

ಬೆಕ್ಕುಗಳು ಗರ್ಭಾವಸ್ಥೆಯಲ್ಲಿರುವಾಗ ನರಕೋಶ ಅಭಿವೃದ್ಧಿಯಾಗುವ ಸಮಯದಲ್ಲೇ ಈ ಬದಲಾವಣೆಯಾಗುತ್ತದೆಯಂತೆ. ಅದೇ ಹಿನ್ನೆಲೆಯಲ್ಲಿ ಸಾಕು ಬೆಕ್ಕುಗಳು ಕಡಿಮೆ ಉತ್ಸಾಹ ಮತ್ತು ಭಯವನ್ನು ಹೊಂದಿರುತ್ತವೆ ಎನ್ನುವುದು ಸಂಶೋಧಕರ ಮಾತು. ಇದಕ್ಕೆಲ್ಲಾ ಮಾನವನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅಂದ ಹಾಗೆ ಇದೇ ರೀತಿ 1960, 1970ರ ಕಾಲದಲ್ಲೂ ಸಂಶೋಧನೆಗಳಾಗಿದ್ದು, ಅದರಲ್ಲೂ ಸಾಕು ಬೆಕ್ಕಿನ ಮೆದುಳಿನ ಗಾತ್ರ ಚಿಕ್ಕದ್ದಾಗುತ್ತಾ ಬಂದಿದ್ದಾಗಿ ವರದಿಯಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!