Friday, June 27, 2025
spot_imgspot_img
spot_imgspot_img

ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನ

- Advertisement -
- Advertisement -

ಬೆಳ್ಳೂರು : ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ವಿಜೃಂಭಣೆಯಿ0ದ ನಡೆದಿದೆ. ಅಭಿಷೇಕ ಪ್ರೀಯನಿಗೆ ಭಕ್ತ ಜನ ಸಾಗರವೆ ಹರಿದು ಬಂದಿದ್ದು, ಬಾಣಂಗಳದಲ್ಲಿ ಮೂಡಿ ಬಂದ ಸಿಡಿ ಮದ್ದಿನ ಕಲರವದೊಂದಿಗೆ ನೆಟ್ಟಣಿಗೆ ದೇವರ ಜಾತ್ರಾ ಮಹೋತ್ಸವ ಸಂಪನ್ನಗೊ0ಡಿದೆ.

ಜಾತ್ರಾ ಮಹೋತ್ಸವವು 16-02-2022ರಂದು ಪ್ರಾರಂಭಗೊ0ಡು ಶ್ರೀ ದೇವರಿಗೆ ಅಭಿಷೇಕ, ಮಹಾಪೂಜೆ, ತುಲಾಭಾರ ಸೇವೆ, ಅಟ್ಟೆ ಅಲಂಕಾರದೊ0ದಿಗೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಶ್ರೀಗಂಧ ಪ್ರಸಾದ, ಮಹಾ ಅನ್ನಸಂತರ್ಪಣೆ, ರಾತ್ರಿ ಕಟ್ಟೆಪೂಜೆ, ಅವಭೃತ ಸ್ವಾನ, ಶ್ರೀ ದುರ್ಗಾಸೇವೆ, ಶ್ರೀ ಕ್ಷೇತ್ರದ ಬೆಡಿ, ಕಟ್ಟೆಪೂಜೆ, ಶ್ರೀ ದೇವರ ಮಹಾದರ್ಶನ ಬಲಿ ನೆರವೇರಿತು.

22-02-2022 ರಂದು ಶ್ರೀ ದೇವರ ಪ್ರಧಾನ ದೈವ ಹುಲಿಭೂತ ಮತ್ತು ಪಟ್ಟದ ಅರಸು ಬಿರ್ನಾಳ್ವ ದೈವಗಳ ನೇಮನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.

- Advertisement -

Related news

error: Content is protected !!