Monday, July 7, 2025
spot_imgspot_img
spot_imgspot_img

ಮಂಗಳೂರು: ಇನ್‌ಸ್ಟ್ರಾಗ್ರಾಂ ಪೇಜ್’ನಲ್ಲಿ ಹಿಂದೂ ದೇವಾಲಯದ ಗೋಪುರದ ಮೇಲೆ ಹಸಿರು ಬಾವುಟ ಹಾರಾಟದ ಎಡಿಟೆಡ್ ವೀಡಿಯೋ ಅಪ್ಲೋಡ್..! ಯುವಕನ ಬಂಧನ

- Advertisement -
- Advertisement -

ಮಂಗಳೂರು: ಟ್ರೋಲ್ ಕಿಂಗ್ 193’ ಇನ್‌ಸ್ಟ್ರಾಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಪೇಜ್‌ನ ಅಡ್ಮಿನ್, ಅಪ್ರಾಪ್ತ ವಯಸ್ಸಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಸ್ನೇಹಿತರೊಂದಿಗೆ ಇನ್‌ಸ್ಟ್ರಾಗ್ರಾಂ ಪೇಜ್ ನೋಡುತ್ತಿದ್ದಾಗ ‘ಟ್ರೋಲ್ ಕಿಂಗ್ 193’ ಖಾತೆಯಲ್ಲಿ ಹಿಂದೂ ದೇವಾಲಯದ ಗೋಪುರದ ಮೇಲೆ ಹಸಿರು ಬಾವುಟ ಹಾರಾಟ ಮಾಡಿರುವ ಎಡಿಟ್ ಮಾಡಿದ ವಿಡಿಯೊ ಹಾಕಿರುವುದು ಕಂಡಿದ್ದು, ಈ ಬಗ್ಗೆ ಮನಸ್ಸಿಗೆ ನೋವಾಗಿರುವುದಾಗಿ ಮಂಗಳೂರಿನ ನಿವಾಸಿಯೊಬ್ಬರು ದೂರು ನೀಡಿದ್ದರು. ದೂರಿನನ್ವಯ ಯುವಕನನ್ನು ಬಂಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ತನ್ನ ಇನ್‌ಸ್ಟ್ರಾಗ್ರಾಂ ಪೇಜ್‌ನ ಮೂಲಕ 17 ವರ್ಷದ ಯುವಕ ಎಡಿಟ್ ಮಾಡಿದ ವಿಡಿಯೊಗಳನ್ನು ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆತನನ್ನು ಬಾಲ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.

ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತಂಡ ಪರಿಶೀಲನೆ ನಡೆಸಿದಾಗ ಈ ಪೇಜ್ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ಆಗಿರುವ ಈ ಯುವಕ ಮಂಗಳೂರು ಕೊಣಾಜೆ ನಿವಾಸಿಯಾಗಿದ್ದು, ಸದ್ಯ ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಆತನಿಗೆ ಯಾರಿಂದಲಾದರೂ ಬೆಂಬಲವಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್‌ನಲ್ಲಿ ತಾನೇ ಈ ಪೋಸ್ಟ್‌ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!