Wednesday, July 2, 2025
spot_imgspot_img
spot_imgspot_img

ಉಡುಪಿ: ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ; ಆರೋಪಿಯ ಬಂಧನ…!

- Advertisement -
- Advertisement -

ಉಡುಪಿ: ಜಿಲ್ಲಾ ಕೋರ್ಟ್ ನ ಆವರಣದಲ್ಲಿ ಸಾಕ್ಷಿದಾರನೊಬ್ಬ ವಕೀಲರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಶಾಹೀದ್ ಮಂಚಿ ಎಂದು ಗುರುತಿಸಲಾಗಿದೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಶಾಹಿದ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಾಗಿ ಆಗಮಿಸಿದ್ದರು, ಆದರೆ ನ್ಯಾಯಾಧೀಶರು ಸಾಕ್ಷಿ ವಿಚಾರಣೆ ನಡೆಸದೇ ಪ್ರಕರಣ ಮುಂದೂಡಿದ್ದರು, ಈ ಹಿನ್ನಲೆ ಪ್ರಕರಣದ ವಕೀಲ ಗುರು ಹಾಗೂ ಸಾಕ್ಷಿದಾರ ಶಾಹೀದ್ ನಡುವೆ ಮಾತಿನಚಕಮಕಿ ನಡೆದಿದೆ. ಬಳಿಕ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಬಹಳ ಆಕ್ರೋಶ ವ್ಯಕ್ತವಾಗಿದೆ.ಕೋರ್ಟ್ ಆವರಣದಲ್ಲಿ ಆರೋಪಿ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ.

ಘಟನೆ ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!