Friday, September 18, 2026
spot_imgspot_img
spot_imgspot_img

ಮಂಗಳೂರು: ರಸ್ತೆಯಲ್ಲಿ ಗದ್ದಲ ಸೃಷ್ಟಿಸಿ, ಸಂಚಾರಕ್ಕೆ ಅಡ್ಡಿ; ನಾಲ್ವರ ಬಂಧನ..!

- Advertisement -
- Advertisement -

ಮಂಗಳೂರು: ರಸ್ತೆಯಲ್ಲಿ ಗದ್ದಲ ಸೃಷ್ಟಿಸಿ, ಸಂಚಾರಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಬಸ್‌ಗಳ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗುಣರಾಜ ಶೆಟ್ಟಿ, ಧನರಾಜ್, ಶರತ್ ಮತ್ತು ಸ್ಟೀವನ್ ನೆಲ್ಸನ್ ನೊರೊನ್ಹಾ ಎಂದು ಗುರುತಿಸಲಾಗಿದೆ.

vtv vitla
vtv vitla

ಎರಡು ಬಸ್‌ಗಳ ಸಿಬ್ಬಂದಿ ಲೇಡಿಹಿಲ್‌ನಲ್ಲಿ ರಸ್ತೆ ತಡೆದು ಒಂದರ ವಿರುದ್ಧ ವಾಹನಗಳನ್ನು ನಿಲ್ಲಿಸಿ ಬಸ್‌ಗಳ ಸಮಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸುತ್ತಿದ್ದರು ಎನ್ನಲಾಗಿದೆ.

ಸಾರ್ವಜನಿಕರು ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ಎರಡೂ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

- Advertisement -

Related news

error: Content is protected !!