- Advertisement -
- Advertisement -


ಕೊಚ್ಚಿ: ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ತ್ವಾನಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಯಿಕ್ಕೋಡ್ನ ನಾರತ್ ವೆಸ್ಟ್ನಲ್ಲಿ ನಡೆದಿದೆ. ಮೃತ ತಾನ್ವಿ, ಪ್ರವೀಣ್ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು.

ತ್ವಾನಿ ಕಣ್ಣೂರಿನ ಇಂಡಿಯನ್ ಪಬ್ಲಿಕ್ ಸ್ಕೂಲ್ನ ಕಿಂಡರ್ಗಾರ್ಡನ್ ವಿದ್ಯಾರ್ಥಿನಿಯಾಗಿದ್ದಳು. ಇದ್ದ ಒಬ್ಬಳೆ ಮಗಳನ್ನು ಕಳೆದುಕೊಂಡ ದಂಪತಿ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮಿಕ್ಸ್ಚರ್ ಸ್ನ್ಯಾಕ್ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ. ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ತಾನ್ವಿ ಮೃತಪಟ್ಟಿದ್ದಾಳೆ.


- Advertisement -








